ಉಗ್ರರಿಂದ ಆರ್‌.ಎಸ್.ಎಸ್ ನಾಯಕನ ಹತ್ಯೆ

ಶುಕ್ರವಾರ, ಏಪ್ರಿಲ್ 26, 2019
35 °C
ಜಮ್ಮು–ಕಾಶ್ಮೀರದ ಕಿಶ್ತ್‌ವಾಡದಲ್ಲಿ ಪರಿಸ್ಥಿತಿ ಉದ್ವಿಗ್ನ: ಕರ್ಫ್ಯೂ ಹೇರಿಕೆ

ಉಗ್ರರಿಂದ ಆರ್‌.ಎಸ್.ಎಸ್ ನಾಯಕನ ಹತ್ಯೆ

Published:
Updated:
Prajavani

ಜಮ್ಮು: ಇಲ್ಲಿನ ಕಿಶ್ತ್‌ವಾಡ ನಗರದಲ್ಲಿ ಮಂಗಳವಾರ ಉಗ್ರರು ಆರ್‌.ಎಸ್‌.ಎಸ್‌ ನಾಯಕ ಮತ್ತು ಅವರ ಅಂಗರಕ್ಷಕನಿಗೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಕರ್ಫ್ಯೂ ಹೇರಲಾಗಿದೆ. 

ಇಲ್ಲಿನ ಆರೋಗ್ಯ ಕೇಂದ್ರದೊಳಗೆ ಮಂಗಳವಾರ ಮಧ್ಯಾಹ್ನ 12.30ರ ವೇಳೆಗೆ ನುಗ್ಗಿದ ಉಗ್ರರು ಆರ್.ಎಸ್.ಎಸ್. ನಾಯಕ ಚಂದ್ರಕಾಂತ ಶರ್ಮಾ ಮತ್ತು ಅವರ ಆಪ್ತರಕ್ಷಕ ರಾಜೇಂದ್ರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಶರ್ಮಾರನ್ನು ವಿಮಾನದ ಮೂಲಕ ಜಮ್ಮುವಿನಲ್ಲಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವಿಗೀಡಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಉಗ್ರರು ಶರ್ಮಾ ಅವರ ಚಲನವಲನದ ಮೇಲೆ ನಿಗಾ ಇಟ್ಟು ಈ ದಾಳಿ ನಡೆಸಿದ್ದಾರೆ’ ಎಂದು ಕಿಶ್ತ್‌ವಾಡದ ಪೊಲೀಸ್‌ ವರಿಷ್ಠಾಧಿಕಾರಿ ಶಕ್ತಿ ಪಾಠಕ್‌ ತಿಳಿಸಿದ್ದಾರೆ. 

ದಾಳಿಯ ನಂತರ, ಅಂಗರಕ್ಷಕ ಹೊಂದಿದ್ದ ಬಂದೂಕನ್ನು ಉಗ್ರರು ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ಶರ್ಮಾ ಹತ್ಯೆ ಖಂಡಿಸಿ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಲಾಯಿತು. 

ಕಳೆದ ನವೆಂಬರ್‌ 1ರಂದು ಬಿಜೆಪಿ ರಾಜ್ಯಘಟಕದ ಕಾರ್ಯದರ್ಶಿ ಅನಿಲ್‌ ಪರಿಹಾರ್‌ ಮತ್ತು ಅವರು ಸಹೋದರ ಅಜಿತ್‌ ಅವರನ್ನು ಇದೇ ಕಿಶ್ತ್‌ವಾಡದಲ್ಲಿ ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !