ದಲಿತ ವಿರೋಧಿ ಬಿಜೆಪಿಗೆ ಮತವಿಲ್ಲ: ಬಿ.ಚನ್ನಕೃಷ್ಣಪ್ಪ ಘೋಷಣೆ

ಶುಕ್ರವಾರ, ಏಪ್ರಿಲ್ 26, 2019
24 °C

ದಲಿತ ವಿರೋಧಿ ಬಿಜೆಪಿಗೆ ಮತವಿಲ್ಲ: ಬಿ.ಚನ್ನಕೃಷ್ಣಪ್ಪ ಘೋಷಣೆ

Published:
Updated:

ಚಿಕ್ಕಬಳ್ಳಾಪುರ: ‘ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಿದೆ. ಸಂವಿಧಾನಕ್ಕೆ ಕುತ್ತು ಬಂದಿದೆ. ಆದ್ದರಿಂದ ದಲಿತರು ಬಿಜೆಪಿಗೆ ಮತ ನೀಡದೆ ಶೋಷಿತರ ಪರವಾದ ಕಾಂಗ್ರೆಸ್‌ಗೆ ಮತ ನೀಡಬೇಕು’ ಎಂದು ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಬಿ.ಚನ್ನಕೃಷ್ಣಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಗತ್ತಿನಲ್ಲಿಯೇ ನಮ್ಮದು ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ರಾಷ್ಟ್ರವಾಗಿದೆ. ಆದರೆ ಮೋದಿ ಅವರ ಸಹದ್ಯೋಗಿಗಳು ಸಂವಿಧಾನ ಬದಲಿಸುವ ಮಾತನಾಡುತ್ತಿದ್ದಾರೆ. ಇದನ್ನು ಪ್ರತಿಭಟಿಸಿದವರನ್ನು ನಾಯಿಗಳಿಗೆ ಹೋಲಿಸಿದ್ದಾರೆ. ಈ ಮೂಲಕ ದೇಶದಲ್ಲಿ ನಿರಂಕುಶ ಆಡಳಿತ ಜಾರಿಗೆ ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

‘ಕಳೆದ ಐದು ವರ್ಷಗಳ ಬಿಜೆಪಿ ಆಡಳಿತದಲ್ಲಿ ದಲಿತರಿಗೆ ಒಂದೇ ಒಂದು ಯೋಜನೆ ಘೋಷಿಸಿಲ್ಲ. ಬರೀ ಸುಳ್ಳಿನ ಭಾಷಣಗಳಿಂದ ಮೋದಿ ಅವರು ಕಾಲ ಕಳೆದಿದ್ದಾರೆ. ಹಗರಣಗಳಲ್ಲಿ ಮುಳುಗಿ ಶ್ರೀಮಂತರ ಚೌಕಿದಾರ ಆಗಿದ್ದಾರೆ. ಕಪ್ಪುಹಣ, ಉದೋಗ್ಯ ಸೃಷ್ಟಿ ವಿಚಾರವಾಗಿ ನೀಡಿದ ಭರವಸೆ ಈಡೇರಿಸಲಿಲ್ಲ. ಬದಲು ನೋಟು ಬದಲಿಸಿ, ಜಿಎಸ್‌ಟಿ ಜಾರಿಗೆ ತಂದು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದರು’ ಎಂದು ತಿಳಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಅರಿಕೆರೆ ಮುನಿರಾಜು, ಮುಖಂಡರಾದ ಮಂಜುನಾಥ್, ಕೆ.ವಿ.ಗವಿರಾಯಪ್ಪ, ಪಿ.ಮುನಿವೆಂಕಟಸ್ವಾಮಿ, ಎನ್.ನರಸಿಂಹಮೇಶ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !