ಪಿಯುಸಿ: ಬಾಲಕಿಯರ ಉತ್ತಮ ಸಾಧನೆ

ಭಾನುವಾರ, ಏಪ್ರಿಲ್ 21, 2019
26 °C
ಫಲಿತಾಂಶದಲ್ಲಿ ಹಳ್ಳಿ ವಿದ್ಯಾರ್ಥಿಗಳೇ ಮುಂದೆ, ಎರಡು ಕಾಲೇಜು ನೂರಕ್ಕೆ ನೂರು ಫಲಿತಾಂಶ

ಪಿಯುಸಿ: ಬಾಲಕಿಯರ ಉತ್ತಮ ಸಾಧನೆ

Published:
Updated:

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಹೊಸಬರ ಪೈಕಿ ಶೇ 70.11 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಒಟ್ಟಾರೆ ಶೇ 63.03ರಷ್ಟು ಫಲಿತಾಂಶ ದೊರೆತಿದೆ. ಈ ಮೂಲಕ ಜಿಲ್ಲೆ ರಾಜ್ಯಮಟ್ಟದಲ್ಲಿ 13ನೇ ಸ್ಥಾನ ಪಡೆದಿದೆ.

ಕಳೆದ ವರ್ಷ 14ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ಒಂದು ಹೆಜ್ಜೆ ಮುಂದೆ ಇಟ್ಟಿದೆಯಾದರೂ ಫಲಿತಾಂಶದಲ್ಲಿ ಮಾತ್ರ ಶೇ 1.5 ರಷ್ಟು ಏರಿಕೆಯಾಗಿದೆ. ಒಟ್ಟಾರೆ ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ (ಶೇ 68.06) ಸಾಧಿಸಿದ್ದು, ಶೇ 58.56 ಬಾಲಕರು ಉತ್ತೀರ್ಣರಾಗಿದ್ದಾರೆ.

ಒಟ್ಟಾರೆ ಫಲಿತಾಂಶದಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಪರೀಕ್ಷೆ ಎದುರಿಸಿದ 2,680 ಹಳ್ಳಿಯ ವಿದ್ಯಾರ್ಥಿಗಳಲ್ಲಿ 2,016 ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ನಗರ ಪ್ರದೇಶದ 8,316 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಆ ಪೈಕಿ 5,693 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 3,945 ವಿದ್ಯಾರ್ಥಿಗಳಲ್ಲಿ 2,885, ಕಲಾ ವಿಭಾಗದಲ್ಲಿ 1,728 ಅಭ್ಯರ್ಥಿಗಳ ಪೈಕಿ 896 ಮತ್ತು ವಾಣಿಜ್ಯ ವಿಭಾಗದಲ್ಲಿ 5,323 ವಿದ್ಯಾರ್ಥಿಗಳಲ್ಲಿ 3,928 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಕನ್ನಡ ಮಾಧ್ಯಮದವರಿಗಿಂತ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರು ಹೆಚ್ಚು (ಶೇ 69.14) ಉತ್ತೀರ್ಣರಾಗಿದ್ದಾರೆ. ಇಂಗ್ಲಿಷ್‌ ಮಾಧ್ಯಮದಲ್ಲಿ 8,549 ಪರೀಕ್ಷೆ ತೆಗೆದುಕೊಂಡವರ ಪೈಕಿ 5,911, ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 4,460 ವಿದ್ಯಾರ್ಥಿಗಳಲ್ಲಿ 2,324 ಜನ ಉತೀರ್ಣರಾಗಿದ್ದಾರೆ.

ಅಂಕಿಅಂಶಗಳು...

13,009 ಹಾಜರಾದವರು

8,235 ಪಾಸಾದವರು

63.03 ಶೇಕಡವಾರು

ಸಂಯೋಜನೆವಾರು ಫಲಿತಾಂಶ

ಕಲಾ ವಾಣಿಜ್ಯ ವಿಜ್ಞಾನ

51.85 73.79 73.13

ಮಾಧ್ಯಮವಾರು ಫಲಿತಾಂಶ

ಮಾಧ್ಯಮ ಶೇಕಡವಾರು

ಕನ್ನಡ 52.11

ಇಂಗ್ಲಿಷ್ 69.14

ನಗರ–ಗ್ರಾಮಾಂತರ ಫಲಿತಾಂಶ

(ಶೇಕಡವಾರು)

ನಗರ ಗ್ರಾಮಾಂತರ

75.22 68.46

ಒಟ್ಟಾರೆ ಫಲಿತಾಂಶ

ದ್ವಿತೀಯ ಪಿಯುಸಿ ಪರೀಕ್ಷೆಯ ಜಿಲ್ಲೆಯ ಫಲಿತಾಂಶದ ವಿವರ

ಅಭ್ಯರ್ಥಿಗಳು ನೋಂದಣಿ ಉತ್ತೀರ್ಣ ಅನುತ್ತೀರ್ಣ ಶೇಕಡಾವಾರು

ಹೊಸ ಅಭ್ಯರ್ಥಿಗಳು 10,996 7,709 3,287 70.11

ಪುನರಾವರ್ತಿತರು 1,659 447 1,212 26.94
ಖಾಸಗಿ ಅಭ್ಯರ್ಥಿ 354 79 275 22.32

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !