ಕ್ರಿಕೆಟ್‌ : ಸುನೀಲ ಕುಮಾರ ಆಯ್ಕೆ

ಸೋಮವಾರ, ಮೇ 27, 2019
24 °C

ಕ್ರಿಕೆಟ್‌ : ಸುನೀಲ ಕುಮಾರ ಆಯ್ಕೆ

Published:
Updated:
Prajavani

ಚಿಕ್ಕೋಡಿ: ನೇಪಾಳದಲ್ಲಿ ಮೇ ಮೊದಲ ವಾರ ನಡೆಯಲಿರುವ ವ್ಹೀಲ್‌ ಚೇರ್‌ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಗೆ ಇಲ್ಲಿನ ಸುನೀಲಕುಮಾರ ಪಾಟೀಲ ಆಯ್ಕೆಯಾಗಿದ್ದಾರೆ.

ಟೂರ್ನಿಯಲ್ಲಿ ಭಾರತ, ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳು ಪಾಲ್ಗೊಳ್ಳಲಿವೆ. ಸುನೀಲಕುಮಾರ ಮೂಲತಃ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಚಿಕ್ಕಕೊಡಗಲಿಯವರು. ಐದು ತಿಂಗಳಿನವರಿದ್ದಾಗ ಬಂದೆರಗಿದ ಪೋಲಿಯೊದಿಂದ ಬಲಗಾಲಿನ ಸ್ವಾಧೀನ ಕಳೆದುಕೊಂಡರು.

ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !