ಸನ್‌ರೈಸರ್ಸ್‌ಗೆ ಮನೀಷ್ ಆಟದ ಹೊಳಪು

ಭಾನುವಾರ, ಮೇ 26, 2019
22 °C
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸವಾಲಿನ ಗುರಿ

ಸನ್‌ರೈಸರ್ಸ್‌ಗೆ ಮನೀಷ್ ಆಟದ ಹೊಳಪು

Published:
Updated:
Prajavani

ಚೆನ್ನೈ: ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮತ್ತು ಕರ್ನಾಟಕದ ಹುಡುಗ ಮನೀಷ್ ಪಾಂಡೆ ಅವರ ಅಬ್ಬರದ ಆಟಕ್ಕೆ ಚೆಪಾಕ್ ಅಂಗಳ ವೇದಿಕೆಯಾಯಿತು.

ಇಬ್ಬರು ಹೊಡೆದ ಅರ್ಧಶತಕಗಳ ಬಲದಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 175 ರನ್‌ ಗಳಿಸಿತು. ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಸವಾಲು ಒಡ್ಡಿತು.

ಟಾಸ್ ಗೆದ್ದ ಚೆನ್ನೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ ಸನ್‌ರೈಸರ್ಸ್‌ಗೆ ಉತ್ತಮ  ಆರಂಭ ನೀಡಿದ್ದ  ಜಾನಿ ಬೆಸ್ಟೊ  ಆಟ ಇಲ್ಲಿ ನಡೆಯಲಿಲ್ಲ. ಎರಡನೇ ಓವರ್‌ನಲ್ಲಿಯೇ ಹರಭಜನ್ ಸಿಂಗ್ ಎಸೆತದಲ್ಲಿ ಜಾನಿ, ವಿಕೆಟ್‌ಕೀಪರ್ ಧೋನಿಗೆ ಕ್ಯಾಚಿತ್ತರು. ಆದರೆ ನಂತರದ ಅವಧಿಯಲ್ಲಿ  ವಾರ್ನರ್ ಮತ್ತು ಪಾಂಡೆ ಆಟ ರಂಗೇರಿತು.

ವಾರ್ನರ್ (57; 45ಎಸೆತ, 3ಬೌಂಡರಿ, 2ಸಿಕ್ಸರ್) ತಮ್ಮ ನೈಜ ಆಟಕ್ಕಿಂತಲೂ ನಿಧಾನವಾಗಿ ಆಡಿದರು. ಆದರೆ, ಮನೀಷ್ ಆಟಕ್ಕೆ ತಡೆಯೇ ಇರಲಿಲ್ಲ. ಆಕರ್ಷಕ ಹೊಡೆತಗಳ ಅವರ ಆಟಕ್ಕೆ ಹೈದರಾಬಾದ್ ಅಭಿಮಾನಿಗಳು ಕುಣಿದಾಡಿದರು.

ಇವರಿಬ್ಬರೂ ಎರಡನೇ ವಿಕೆಟ್ ಜೊತೆಯಾಟದಲ್ಲಿ 115 ರನ್‌ಗಳನ್ನು ಸೇರಿಸಿದರು. 14ನೇ ಓವರ್‌ನಲ್ಲಿ ಹರಭಜನ್ ಮತ್ತೊಮ್ಮೆ ಕೈಚಳಕ ತೋರಿದರು. ಅವರ ಎಸೆತವನ್ನು ಮುಂದಡಿ ಇಟ್ಟು ಆಡುವ ಪ್ರಯತ್ನದಲ್ಲಿ ವಾರ್ನರ್ ವಿಫಲರಾದರು. ಧೋನಿ ಮಾಡಿದ ಮಿಂಚಿನ ವೇಗದ ಸ್ಟಂಪಿಂಗ್‌ಗೆ ವಾರ್ನರ್ ಶರಣಾದರು.

ಆದರೆ ಪಾಂಡೆ (ಔಟಾಗದೆ 83; 49ಎ, 7ಬೌಂ, 3ಸಿ) ಮತ್ತಷ್ಟು ಬೀಸಾಟವಾಡಿದರು. ಅವರಿಗೆ ವಿಜಯಶಂಕರ್ (26; 20ಎ, 2ಬೌಂ, 1ಸಿ) ಉತ್ತಮ ಜೊತೆ ನೀಡಿದರು. ಇದರಿಂದಾಗಿ ತಂಡವು ಉತ್ತಮ ಮೊತ್ತ ಗಳಿಸಿತು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !