ಶ್ರೀಲಂಕಾ ಸ್ಫೋಟ: ರಕ್ಷಣಾ ಕಾರ್ಯದರ್ಶಿ, ಪೊಲೀಸ್‌ ಮುಖ್ಯಸ್ಥರ ರಾಜೀನಾಮೆಗೆ ಸೂಚನೆ

ಶುಕ್ರವಾರ, ಮೇ 24, 2019
22 °C

ಶ್ರೀಲಂಕಾ ಸ್ಫೋಟ: ರಕ್ಷಣಾ ಕಾರ್ಯದರ್ಶಿ, ಪೊಲೀಸ್‌ ಮುಖ್ಯಸ್ಥರ ರಾಜೀನಾಮೆಗೆ ಸೂಚನೆ

Published:
Updated:

ಕೊಲಂಬೊ: ಈಸ್ಟರ್‌ ದಿನ ಶ್ರೀಲಂಕಾದಲ್ಲಿ ನಡೆದ ಸರಣಿ ಸ್ಫೋಟಗಳನ್ನು ತಡೆಯಲು ವಿಫಲವಾಗಿದ್ದಕ್ಕೆ ರಾಜೀನಾಮೆ ನೀಡುವಂತೆ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೊ ಮತ್ತು ಪೊಲೀಸ್‌ ಮುಖ್ಯಸ್ಥ ಪುಜೀತ್‌ ಜಯಸುಂದರ್‌ ಅವರಿಗೆ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ್‌ ಸಿರಿಸೇನಾ ಸೂಚಿಸಿದ್ದಾರೆ.

 ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ್ದ ಸಿರಿಸೇನಾ ಅವರು, ಮುಂದಿನ 24 ಗಂಟೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಬದಲಾವಣೆ ಮಾಡುವುದಾಗಿ ಹೇಳಿದ್ದರು.

ಗುಪ್ತಚರ ಮಾಹಿತಿ ಇದ್ದರೂ ದಾಳಿ ತಡೆಯಲು ಅಧಿಕಾರಿಗಳು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಸಿರಿಸೇನಾ ತಿಳಿಸಿದ್ದರು.

ಸೇನೆಯ ಮಾಜಿ ಕಮಾಂಡರ್‌ ದಯಾ ರತ್ನಾಯಕೆ ಅವರನ್ನು ರಕ್ಷಣಾ ಕಾರ್ಯದರ್ಶಿ ಹುದ್ದೆಗೆ ಪರಿಗಣಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

 359ಕ್ಕೆ ಏರಿಕೆ: ಸ್ಫೋಟದಿಂದ ಸಾವಿಗೀಡಾದವರ ಸಂಖ್ಯೆ 359ಕ್ಕೆ ಏರಿದ್ದು, 500 ಮಂದಿ ಗಾಯಗೊಂಡಿದ್ದಾರೆ. ಸಾವಿಗೀಡಾದ 34 ವಿದೇಶಿಯರನ್ನು ಗುರುತಿಸಲಾಗಿದೆ. ಇವರಲ್ಲಿ ಹತ್ತು ಭಾರತೀಯರು ಸೇರಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !