ಗುರುವಾರ , ಸೆಪ್ಟೆಂಬರ್ 19, 2019
29 °C

ಪ್ರತ್ಯೇಕ ಪ್ರಕರಣ: ಬಂಧಿತರ ಬಿಡುಗಡೆಗೆ ಸಿ.ಟಿ. ರವಿ ಆಗ್ರಹ

Published:
Updated:

ಚಿಕ್ಕಮಗಳೂರು: ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ರಾಧಿಕಾ ಕುಮಾರಸ್ವಾಮಿ ಅವರ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಕಮೆಂಟ್‌ ಮಾಡಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ಬಂಧಿಸಿರುವ ಅಜಿತ್‌ಶೆಟ್ಟಿ ಹಾಗೂ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ನಕಲಿ ಪತ್ರ ಸೃಷ್ಟಿ ದೂರಿನ ಹಿನ್ನೆಲೆಯಲ್ಲಿ ಬಂಧಿಸಿರುವ ಪತ್ರಕರ್ತ ಹೇಮಂತ್‌ ಕುಮಾರ್‌, ಶ್ರುತಿ ಬೆಳ್ಳಕ್ಕಿ, ಶಾರದಾ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಶಾಸಕ ಸಿ.ಟಿ. ರವಿ ಇಲ್ಲಿ ಶುಕ್ರವಾರ ಆಗ್ರಹಿಸಿದರು.

‘ಬಂಧಿತರನ್ನು ತಕ್ಷಣ ಬಿಡುಗಡೆ ಮಾಡಬೇಕು. ಈ ನಿಟ್ಟಿನಲ್ಲಿ ಕ್ರಮ ವಹಿಸದಿದ್ದರೆ ಹೋರಾಟದ ಹಾದಿ ತುಳಿಯುವುದು ಅನಿವಾರ್ಯ’ ಎಂದು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

‘ಕುಮಾರಸ್ವಾಮಿ ಮತ್ತು ರಾಧಿಕಾ ಅವರ ವಿಷಯ ಖಾಸಗಿಯಾಗಿರಬಹುದು. ವಿಷಯ ಖಾಸಗಿಯಾದರೂ ವ್ಯಕ್ತಿ (ಎಚ್‌ಡಿಕೆ) ಸಾರ್ವಜನಿಕವಾಗಿರುವುದರಿಂದ ಅವರ ಕೇಂದ್ರಿತವಾಗಿ ಚರ್ಚೆ ನಡೆದೇ ನಡೆಯುತ್ತದೆ. ಸಾರ್ವಜನಿಕ ಕ್ಷೇತ್ರದಲ್ಲಿರುವವರು ಒಳ್ಳೆಯದು ಮಾಡಿದಾಗಲೂ, ತಪ್ಪು ಮಾಡಿದಾಗಲೂ ಸುದ್ದಿಯಾಗುತ್ತದೆ. ಮುಚ್ಚಿಡಲು ಬಯಸಿದ್ದೇ ಚರ್ಚೆಗೆ ಹೆಚ್ಚುಗ್ರಾಸವಾಗುತ್ತದೆ’ ಎಂದು ಕುಟುಕಿದರು.

Post Comments (+)