ಎಎಪಿ ಪರ ಪ್ರಕಾಶ್‌ ರಾಜ್‌ ಪ್ರಚಾರ

ಸೋಮವಾರ, ಮೇ 27, 2019
23 °C

ಎಎಪಿ ಪರ ಪ್ರಕಾಶ್‌ ರಾಜ್‌ ಪ್ರಚಾರ

Published:
Updated:
Prajavani

ನವದೆಹಲಿ: ನಟ ಪ್ರಕಾಶ್‌ ರಾಜ್‌ ಅವರು ಮುಂದಿನ ಒಂದು ವಾರ ದೆಹಲಿಯಲ್ಲಿದ್ದು, ಲೋಕಸಭಾ ಚುನಾವಣೆಯತಲ್ಲಿ ಸ್ಪರ್ಧಿಸಿರುವ ಎಎಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

‘ಪ್ರಕಾಶ್‌ ಅವರು ನವದೆಹಲಿ, ದೆಹಲಿ ಪೂರ್ವ, ದೆಹಲಿ ಈಶಾನ್ಯ ಹಾಗೂ ಚಾಂದನಿಚೌಕ್‌ ಕ್ಷೇತ್ರಗಳ ಅಭ್ಯರ್ಥಿಗಳ ಪರ ಆಯೋಜಿಸುವ ರ್‍ಯಾಲಿಗಳಲ್ಲಿ ಪಾಲ್ಗೊಳ್ಳುವರು. ಉಳಿದ ಕ್ಷೇತ್ರಗಳ ಪ್ರಚಾರ ಕಾರ್ಯಕ್ರಮಗಳಿಗೆ ಶೀಘ್ರ ಅಂತಿಮ ರೂಪ ನೀಡಲಾಗುವುದು’ ಎಂದು ಪಕ್ಷದ ಮುಖಂಡ ಗೋಪಾಲ್‌ ರಾಯ್‌ ತಿಳಿಸಿದ್ದಾರೆ.

‘ನಾನು ಎಎಪಿಯ ಸದಸ್ಯನಲ್ಲ. ಆದರೆ ಎಎಪಿಯಂಥ ಒಂದು ಪಕ್ಷ ಬೇಕು ಎನ್ನುವ ಜನಸಾಮಾನ್ಯರಲ್ಲಿ ನಾನೂ ಒಬ್ಬ. ಸಮಾಜದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಕೆಲಸ ಮಾಡುವಂಥ ಪಕ್ಷಗಳ ಅಗತ್ಯ ನಮಗೆ ಇದೆ. ಕೋಮುವಾದ ಮತ್ತು ದ್ವೇಷದ ರಾಜಕಾರಣವನ್ನು ಕೊನೆಗೊಳಿಸಿ ಪ್ರಜಾಪ್ರಭುತ್ವವನ್ನು ಮರುಸ್ಥಾಪನೆ ಮಾಡುವುದು ಇಂದಿನ ಅಗತ್ಯವಾಗಿದೆ’ ಎಂದು ಪ್ರಕಾಶ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !