ಬೆಂಗಳೂರು: ಗೋವಾ ಕ್ರಿಕೆಟ್ ತಂಡದಲ್ಲಿ ಆಡುತ್ತಿರುವ ಕರ್ನಾಟಕದ ವಾಸುಕಿ ಕೌಶಿಕ್ ಅವರು ಲಿಸ್ಟ್ ಎ ಮಾದರಿಯ ಕ್ರಿಕೆಟ್ನಲ್ಲಿ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಕ್ರಿಕೆಟ್ ಇತಿಹಾಸದ ದೈತ್ಯ ವೇಗದ ಬೌಲರ್ಗಳಲ್ಲಿ ಒಬ್ಬರಾದ ವೆಸ್ಟ್ ಇಂಡೀಸ್ನ ಜೊಯಲ್ ಗಾರ್ನರ್ ಅವರ ದಾಖಲೆಯನ್ನು ಸರಾಸರಿಯ ದಾಖಲೆಯನ್ನು ಬೆಂಗಳೂರಿನ ಬಲಗೈ ಮಧ್ಯಮವೇಗಿ ಕೌಶಿಕ್ ಮೀರಿದ್ಧಾರೆ. 33 ವರ್ಷದ ಕೌಶಿಕ್ 16.33ರ ಸರಾಸರಿಯನ್ನು (ಗಳಿಸಿದ ಪ್ರತಿ ವಿಕೆಟ್ಗೂ ಕೊಟ್ಟ ರನ್ಗಳು) ನಿರ್ವಹಿಸಿದ್ದಾರೆ. ಈ ಮಾದರಿಯಲ್ಲಿ ಅವರು 51 ಪಂದ್ಯಗಳಿಂದ 99 ವಿಕೆಟ್ ಗಳಿಸಿದ್ದಾರೆ. 1617 ರನ್ ಕೊಟ್ಟಿದ್ದಾರೆ.

ಜೊಯಲ್ ಗಾರ್ನರ್ 16.61ರ ಸರಾಸರಿ ಮಾಡಿದ್ದರು. ವಿಶೇಷವೆಂದರೆ ಈ ದಾಖಲೆಯ ಪಟ್ಟಿಯಲ್ಲಿ ಇರುವ ಭಾರತದ ಏಕೈಕ ಬೌಲರ್ ಕೌಶಿಕ್ ಅವರಾಗಿದ್ದಾರೆ. ವೆಸ್ಟ್ ಇಂಡೀಸ್ನ ಕೀತ್ ಬಾಯ್ಸ್ ಅಗ್ರಸ್ಥಾನದಲ್ಲಿದ್ದಾರೆ. 6.8 ಅಡಿ ಎತ್ತರದ ದೈತ್ಯವೇಗಿ ಗಾರ್ನರ್ ಅವರು 1977–87ರ ಅವಧಿಯಲ್ಲಿ ಬ್ಯಾಟರ್ಗಳಿಗೆ ಸಿಂಹಸ್ವಪ್ನರಾಗಿದ್ದರು. ಅವರ ಯಮವೇಗದ ಯಾರ್ಕರ್ ಮತ್ತು ಬೌನ್ಸರ್ಗಳನ್ನು ಆ ಕಾಲಘಟ್ಟದ ಬ್ಯಾಟರ್ಗಳು ಎದುರಿಸಬೇಕಿತ್ತು.

ಆದರೆ ಪ್ರತಿ ಗಂಟೆಗೆ 130 ಕಿ.ಮೀ ವೇಗದ ಎಸೆತಗಳನ್ನು ಹಾಕುವ ಕೌಶಿಕ್ ಚಾಣಾಕ್ಷ ಬೌಲರ್. ಪ್ರತಿ ಋತುವಿನಲ್ಲಿಯೂ ಸ್ಥಿರತೆ ಕಾಪಾಡಿಕೊಂಡಿದ್ದಾರೆ. ಅದರಲ್ಲೂ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅವರು 3.79ರ ಎಕಾನಮಿಯನ್ನು ನಿರ್ವಹಿಸಿದ್ದಾರೆ. 2019ರಲ್ಲಿ ಅವರು ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಈ ವರ್ಷ ಅವರು ಕರ್ನಾಟಕವನ್ನು ತೊರೆದು ಗೋವಾ ತಂಡ ಸೇರ್ಪಡೆಯಾಗಿದ್ದಾರೆ. ವಿಜಯ್ ಹಜಾರೆ ಟ್ರೋಫಿಯ ಲೀಗ್ ಹಂತದಲ್ಲಿ ಅವರು ಒಟ್ಟು 17 ವಿಕೆಟ್ ಗಳಿಸಿದ್ಧಾರೆ.

‘ಇದೊಂದು ಅಪರೂಪದ ದಾಖಲೆ. ನನಗೂ ಗೊತ್ತಿರಲಿಲ್ಲ. ದೇಶಿ ಕ್ರಿಕೆಟ್ ಅನ್ನು ಬಹಳ ನಿಕಟವಾಗಿ ಗಮನಿಸುವ ರಾಮಚಂದ್ರ (ಸಾಫ್ಟ್ವೇರ್ ಎಂಜಿನಿಯರ್) ಅವರು ತಿಳಿಸಿದಾಗಲೇ ನನಗೆ ಗೊತ್ತಾಯಿತು. ಅಚ್ಚರಿ ಮತ್ತು ಖುಷಿಯಾಯಿತು. ಕೊನೆಯ ಪಂದ್ಯದಲ್ಲಿ ಒಂದು ಕ್ಯಾಚ್ ಡ್ರಾಪ್ ಆಗದೇ ಹೋಗಿದ್ದರೆ ನನ್ನ 100 ವಿಕೆಟ್ ಪೂರ್ಣವಾಗುತ್ತಿತ್ತು. ಪ್ರಥಮ ದರ್ಜೆ ಮತ್ತು ಲಿಸ್ಟ್ ಎ ಕ್ರಿಕೆಟ್ ಮಾದರಿಯಲ್ಲಿ ನೂರಕ್ಕೂ ಹೆಚ್ಚು ವಿಕೆಟ್ ಪಡೆದ ದಾಖಲೆಯಾಗುತ್ತಿತ್ತು’ ಎಂದು ಕೌಶಿಕ್ ‘ಪ್ರಜಾವಾಣಿ‘ಗೆ ತಿಳಿಸಿದರು.

ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 2.13 ಮತ್ತು ಲಿಸ್ಟ್ ಎ ಮಾದರಿಯಲ್ಲಿ 3.75 ಎಕಾಮಿಯನ್ನು ಕೌಶಿಕ್ ಹೊಂದಿದ್ದಾರೆ. ಟಿ20 ಕಾಲಘಟ್ಟದಲ್ಲಿ ಬ್ಯಾಟರ್ಗಳು ಎಲ್ಲ ಮಾದರಿಯಲ್ಲಿಯೂ ಬೀಸಾಟವಾಡುತ್ತಿದ್ದಾರೆ. ಇಂತಹ ಸಮಯದಲ್ಲಿಯೂ ಇಷ್ಟು ಬಿಗಿಹಿಡಿತದ ಶಿಸ್ತಿನ ಬೌಲಿಂಗ್ ಮಾಡುತ್ತಿರುವುದು ಕೂಡ ದಾಖಲೆ. ಆದರೆ ಪ್ರತಿ ಗಂಟೆಗೆ 140–150 ಕಿ.ಮೀ ವೇಗದ ಬೌಲರ್ಗಳಿಗೆ ರಾಷ್ಟ್ರೀಯ ತಂಡ ಮತ್ತು ಐಪಿಎಲ್ನಲ್ಲಿ ಆಡುವ ಅವಕಾಶಗಳು ಹೆಚ್ಚು ಸಿಗುತ್ತಿವೆ. ಕೌಶಿಕ್ ಅವರ ವೇಗ ಕಡಿಮೆ ಎಂಬ ಕಾರಣಕ್ಕೆ ಆಯ್ಕೆಗಾರರು ಗಮನ ಹರಿಸುತ್ತಿಲ್ಲ.

ಕೌಶಿಕ್ ಅವರು ಎಂಜಿನಿಯರಿಂಗ್ ಪದವೀಧರ. ಅಮೇಜಾನ್ ಸಂಸ್ಥೆಯಲ್ಲಿ ಕೆಲಕಾಲ ಕಾರ್ಯನಿರ್ವಹಿಸಿದರು. ಆದರೆ ಕ್ರಿಕೆಟ್ಗಾಗಿ ಉತ್ತಮ ವೇತನದ ಉದ್ಯೋಗ ಬಿಟ್ಟರು. ಏಳು ವರ್ಷಗಳ ಹಿಂದೆ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದರು. ಅದರಲ್ಲೂ ಕಳೆದ ನಾಲ್ಕು ವರ್ಷಗಳಿಂದ ಅವರು ನಿರಂತರವಾಗಿ ಎಲ್ಲಮಾದರಿಗಳಲ್ಲಿಯೂ ಬೊಗಸೆ ತುಂಬಾ ವಿಕೆಟ್ ಗಳಿಸಿದ್ಧಾರೆ. ಇದೀಗ ಗೋವಾ ತಂಡದಲ್ಲಿಯೂ ತಮ್ಮ ಕೈಚಳಕವನ್ನು ಮುಂದುವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.