ಬುಧವಾರ, ಸೆಪ್ಟೆಂಬರ್ 29, 2021
20 °C

‘ಮೋದಿಯನ್ನೇಕೆ ಬಂಧಿಸಬಾರದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಶ್ಚಿಮ ಬಂಗಾಳ: ಶಾರದಾ ಸಮೂಹದ ಸ್ಥಾಪಕ ಸುದಿಪ್ತಾ ಸೇನ್‌ ಜತೆಗೆ ಫೋಟೊ ತೆಗೆಸಿಕೊಂಡ ಕಾರಣಕ್ಕೆ ಟಿಎಂಸಿ ಮುಖಂಡ ಮದನ್‌ ಮಿತ್ರಾ ಅವರನ್ನು ಬಂಧಿಸಿದ್ದರು. ಅದೇ ರೀತಿಯಲ್ಲಿ, ವಿದೇಶಕ್ಕೆ ಪರಾರಿಯಾಗಿರುವ ವಜ್ರ ಉದ್ಯಮಿ ನೀರವ್‌ ಮೋದಿ ಜತೆಗೆ ಫೋಟೊ ತೆಗೆಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಬಂಧಿಸಬೇಕು ಎಂದು ಟಿಎಂಸಿ ಮುಖಂಡ ಅಭಿಷೇಕ್‌ ಬ್ಯಾನರ್ಜಿ ಹೇಳಿದ್ದಾರೆ.

ಬಹುಕೋಟಿ ವಂಚನೆ ಆರೋಪದ ಶಾರದಾ ಚಿಟ್‌ಫಂಟ್‌ ಹಗರಣದಲ್ಲಿ ಮಿತ್ರಾ ಅವರು 21 ತಿಂಗಳು ಜೈಲುವಾಸ ಅನುಭವಿಸಿದ್ದರು. 2016ರ ಸೆಪ್ಟೆಂಬರ್‌ನಲ್ಲಿ ಜಾಮೀನಿನಲ್ಲಿ ಅವರು ಬಿಡುಗಡೆಯಾಗಿದ್ದಾರೆ. ಅವರು ಪಶ್ಚಿಮ ಬಂಗಾಳದ ಸಾರಿಗೆ ಸಚಿವರಾಗಿದ್ದರು. 

2018ರಲ್ಲಿ ದಾವೋಸ್‌ನಲ್ಲಿ ನಡೆದ ಉದ್ಯಮ ಪ್ರಮುಖರ ಸಭೆಯಲ್ಲಿ ನೀರವ್‌ ಮೋದಿ ಭಾಗಿಯಾಗಿದ್ದರು. ನರೇಂದ್ರ ಮೋದಿ ಜತೆಗೆ ಫೋಟೊ ತೆಗೆಸಿಕೊಂಡಿದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು