ಮೇವಿಲ್ಲದೆ 300 ಯಾಕ್ ಸಾವು

ಗ್ಯಾಂಗ್ಟಕ್: ಉತ್ತರ ಸಿಕ್ಕಿಂ ಭಾಗದಲ್ಲಿ ಕಳೆದೊಂದು ವರ್ಷದಿಂದ ಆಗುತ್ತಿರುವ ಭಾರಿ ಹಿಮಪಾತದಿಂದಾಗಿ ಮೇವಿಲ್ಲದೇ ಅಂದಾಜು 300 ಚಮರೀಮೃಗ(ಯಾಕ್)ಮೃತಪಟ್ಟಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2018 ಡಿಸೆಂಬರ್ನಿಂದ ಮುಕುತಾಂಗ್ ಮತ್ತು ಯಮ್ತಾಂಗ್ ಪ್ರದೇಶದಲ್ಲಿ ಮೇವಿಲ್ಲದೆ ಯಾಕ್ಗಳು ಮೃಪಟ್ಟಿರುವುದನ್ನು ಸಿಕ್ಕಿಂ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜ್ ಯಾದವ್ ದೃಢಪಡಿಸಿದ್ದಾರೆ. ಸ್ಥಳೀಯರು 500ಕ್ಕೂ ಅಧಿಕ ಯಾಕ್ಗಳು ಮೃತಪಟ್ಟಿವೆ ಎನ್ನುತ್ತಿದ್ದಾರೆ. ಪ್ರಸ್ತುತ ಮುಕುತಾಂಗ್ನಲ್ಲಿ 250 ಯಾಕ್ ಕಳೇಬರ ಹಾಗೂ ಯಮ್ತಾಂಗ್ನಲ್ಲಿ 50 ಯಾಕ್ ಕಳೇಬರ ಪತ್ತೆಯಾಗಿವೆ ಎಂದು ಯಾದವ್ ತಿಳಿಸಿದ್ದಾರೆ.
ನಿರಂತರವಾದ ಹಿಮಪಾತದಿಂದ ಹುಲ್ಲು ಬೆಳೆಯಲೇ ಇಲ್ಲ. ಹಲವು ತಿಂಗಳುಗಳಿಂದ ಯಾಕ್ಗಳಿಗೆ ಸೂಕ್ತ ಮೇವು ದೊರೆತಿರಲಿಲ್ಲ. ಪಶು ಸಂಗೋಪನಾ ಇಲಾಖೆಯ ವೈದ್ಯಕೀಯ ತಂಡದ ಅಧಿಕಾರಿಗಳು ಮುಕುತಾಂಗ್ಗೆ ಭೇಟಿ ನೀಡಿದ್ದು, ಜತೆಗೆ ಬದುಕುಳಿದಿರುವ ಯಾಕ್ಗಳಿಗೆ ಮೇವು ಸರಬರಾಜು ಮಾಡಲಾಗಿದೆ. ಜಿಲ್ಲಾಡಳಿತ ಸಿದ್ಧಪಡಿಸುವ ವರದಿ ಆಧರಿಸಿ ಯಾಕ್ ಸಾಕಿದ್ದ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.