ಶುಕ್ರವಾರ, ಸೆಪ್ಟೆಂಬರ್ 20, 2019
25 °C
ಸಿದ್ದರಾಮಯ್ಯ ವಿರುದ್ಧ ಆಯನೂರು ಮಂಜುನಾಥ್ ಏಕವಚನದಲ್ಲಿ ವಾಗ್ದಾಳಿ

ಆರ್‌ಎಸ್‌ಎಸ್‌ ವಿರುದ್ಧ ಟೀಕೆ: ಆಯನೂರು ಗರಂ

Published:
Updated:
Prajavani

ಶಿವಮೊಗ್ಗ: ‘ಸಿದ್ದರಾಮಯ್ಯ ನೀನು ನಿಜವಾಗಿಯೂ ಗಂಡಸಾಗಿದ್ರೆ ಗಾಂಧೀಜಿಯನ್ನು ಕೊಂದದ್ದು ಆರ್‌ಎಸ್‌ಎಸ್‌ನವರು ಎಂಬುದನ್ನು ಪ್ರಮಾಣಪತ್ರ ಮಾಡಿಸಿ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡು’ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವಾಗ್ದಾಳಿ ನಡೆಸಿದರು.

‘ಸಿದ್ದರಾಮಯ್ಯನಿಂದ ಪ್ರೇರಿತನಾಗಿ ಏಕವಚನದಲ್ಲಿ ಮಾತನಾಡುತ್ತಿದ್ದೇನೆ’ ಎಂದರು. ‘ಸಿದ್ದರಾಮಯ್ಯ ಆಯೋಗ್ಯ. ಸರ್ವಾಧಿಕಾರಿ, ವಿಶ್ವಾಸಘಾತುಕ, ಅಸಮರ್ಥ ರಾಜಕಾರಣಿ. ನಿನ್ನ ಯೋಗ್ಯತೆಗೆ ಸ್ವಕ್ಷೇತ್ರ ಚಾಮುಂಡೇಶ್ವರಿಯನ್ನೂ ಗೆಲ್ಲಲಾಗಲಿಲ್ಲ. ನಮ್ಮ ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತೀಯಾ. ಮೋದಿಯನ್ನು ಸರ್ವಾಧಿಕಾರಿ ಎನ್ನುತ್ತೀಯಾ. ಇನ್ನು ಮುಂದೆ ನಾಲಿಗೆ ಹಿಡಿತದಲ್ಲಿ ಇದ್ದರೆ ಸರಿ. ಇಲ್ಲವಾದರೆ ನಿನ್ನಂತಹ ಗಿರಾಕಿಯನ್ನು ಎದುರಿಸುವುದಕ್ಕೆ ನಮಗೆ ಬರುತ್ತದೆ’ ಎಂದು ಎಚ್ಚರಿಸಿದರು.

Post Comments (+)