ಯುವಿಸಿಇ: ಶೇ 10ರಷ್ಟು ಸೀಟು ಖೋತಾ ಆತಂಕ

ಬುಧವಾರ, ಮೇ 22, 2019
29 °C

ಯುವಿಸಿಇ: ಶೇ 10ರಷ್ಟು ಸೀಟು ಖೋತಾ ಆತಂಕ

Published:
Updated:

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಒಂದಾದ ನಗರದ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ (ಯುವಿಸಿಇ)2019–20ನೇ ಸಾಲಿಗೆ ಶೇ 10ರಷ್ಟು ಸೀಟುಗಳು ನಷ್ಟವಾಗುವ ಆತಂಕ ಎದುರಾಗಿದೆ.

ಕಾಲೇಜಿಗೆ ಭೇಟಿ ನೀಡಿದ್ದ ಪರಿಶೀಲನಾ ತಂಡ ಕಾಯಂ ಬೋಧಕರ ಕೊರತೆ ಇದೆ ಎಂದು ತಿಳಿಸಿತ್ತು. ತಂಡದ ಶಿಫಾರಸಿನಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಶೇ 10ರಷ್ಟು ಸೀಟು ಕಡಿತಕ್ಕೆ ಸೂಚಿಸಿದೆ. ಸೀಟು ಕಡಿತ ಮಾಡದಂತೆ ಬೆಂಗಳೂರು ವಿಶ್ವವಿದ್ಯಾಲಯ ಮನವಿ ಮಾಡಿಕೊಂಡರೂ ಮಂಡಳಿಯಿಂದ ಇದುವರೆಗೆ ಪೂರ್ತಿ ಸೀಟು ಭರ್ತಿ ಮಾಡಿಕೊಳ್ಳುವುದಕ್ಕೆ ಹಸಿರು ನಿಶಾನೆ ದೊರೆತಿಲ್ಲ.

ರಾಜ್ಯದ ಇತರ ಕೆಲವು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸಹ ಸೀಟುಗಳನ್ನು ಕಡಿತಗೊಳಿಸಲು ಮಂಡಳಿ ಸೂಚನೆ ನೀಡಿತ್ತು. ಆದರೆ ಈಚೆಗೆ ತನ್ನ ಆದೇಶವನ್ನು ಸಡಿಲಗೊಳಿಸಿ ಕಾಲೇಜುಗಳಲ್ಲಿ ಎಲ್ಲ ಸೀಟುಗಳ ಭರ್ತಿಗೆ ಅನುಮತಿ ನೀಡಿತ್ತು. ಆದರೆ, ಯುವಿಸಿಇ ಬಗ್ಗೆ ಮಂಡಳಿ ಯಾವುದೇ ನಿರ್ಧಾರ ಕೈಗೊಂಡಿಲ್ಲ.

‘ಸೀಟು ಕಡಿತಗೊಳಿಸಿದ ಮಾಹಿತಿ ನಮಗೆ ದೊರೆತ ತಕ್ಷಣ ಸೀಟು ಭರ್ತಿಗೆ ಅವಕಾಶ ನೀಡಬೇಕೆಂದು ಕೋರಿಕೆ ಸಲ್ಲಿಸಿದ್ದೇವೆ. ಅಗತ್ಯ ದಾಖಲೆಪತ್ರಗಳನ್ನೂ ನೀಡಿದ್ದೇವೆ. ಹೀಗಿದ್ದರೂ ಮಂಡಳಿಯಿಂದ ಯಾವುದೇ ಸೂಚನೆ ಬಂದಿಲ್ಲ. ಮಂಡಳಿ ಅಧ್ಯಕ್ಷರನ್ನು ಭೇಟಿ ಮಾಡಿ, ಸಂಪೂರ್ಣ ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದೇನೆ’ ಎಂದು ಬೆಂಗಳೂರು ವಿ.ವಿ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇತರೆ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಹೋಲಿಸಿದರೆ, ನಮ್ಮಲ್ಲಿನ ಬೋಧಕರು ಹೆಚ್ಚು ಅರ್ಹತೆ ಇರುವವರು ಎಂಬುದನ್ನು ಎಐಸಿಟಿಇ ಅಧ್ಯಕ್ಷರಿಗೆ ಮನವರಿಕೆ ಮಾಡಿದ್ದೇನೆ’ ಎಂದರು.

ವಿದ್ಯಾರ್ಥಿಗಳ ಮೆಚ್ಚಿನ ಕಾಲೇಜು: ಪ್ರತಿ ವರ್ಷ ಸಿಇಟಿಯಲ್ಲಿಹೆಚ್ಚಿನ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಮೊದಲ ಕಾಲೇಜು ಯುವಿಸಿಇ. ಮೊದಲ ಸುತ್ತಿನಲ್ಲೇ ಇಲ್ಲಿನ ಬಹುತೇಕ ಸೀಟುಗಳು ಭರ್ತಿಯಾಗಿರುತ್ತವೆ. ರಾಜ್ಯದಲ್ಲಿಖಾಸಗಿ ಕಾಲೇಜುಗಳಿಗೆ ಸ್ಪರ್ಧೆ ನೀಡುತ್ತಿರುವ ಏಕೈಕ ಸರ್ಕಾರಿ ಕಾಲೇಜು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !