ಬೀನ್ಸ್‌, ಶುಂಠಿ ಬೆಲೆ ಗಗನಕ್ಕೆ

ಬುಧವಾರ, ಜೂನ್ 19, 2019
31 °C

ಬೀನ್ಸ್‌, ಶುಂಠಿ ಬೆಲೆ ಗಗನಕ್ಕೆ

Published:
Updated:
Prajavani

ಬೆಂಗಳೂರು: ನಗರದಲ್ಲಿ ತರಕಾರಿಗಳ ಬೆಲೆ ಗಗನಕ್ಕೆ ಮುಟ್ಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಒಂದೆಡೆ ಸುಡುವ ಬಿಸಿಲು, ಮತ್ತೊಂದೆಡೆ ಸುರಿಯುತ್ತಿರುವ ಮಳೆಯಿಂದ ತರಕಾರಿಗಳ ಬೆಲೆ ದಿಢೀರ್‌ ಏರಿಕೆಯಾಗಿದೆ. ನಗರದ ಕೆ.ಆರ್‌.ಮಾರುಕಟ್ಟೆಯಲ್ಲಿ ಶನಿವಾರ ಶುಂಠಿ ಪ್ರತಿ ಕೆ.ಜಿಗೆ ₹160ರಿಂದ ₹200ಕ್ಕೆ ಮಾರಾಟವಾಗಿದೆ. ಬೆಳ್ಳುಳ್ಳಿ ₹120, ಹಸಿ ಮೆಣಸಿನಕಾಯಿ ಹಾಗೂ ಬೀನ್ಸ್‌ ₹100ರ ಗಡಿ ದಾಟಿದೆ.

‘ಕಳೆದ ವಾರ ತರಕಾರಿಗಳ ಬೆಲೆ ನೂರು ರೂಪಾಯಿಯ ಒಳಗಿತ್ತು. ಬೆಲೆ ಏಕಾಏಕಿ ಏರಿಕೆಯಾಗಿದೆ. ಅಧಿಕ ಪ್ರಮಾಣದಲ್ಲಿ ಮಳೆ ಸುರಿದ ಕಾರಣ ತರಕಾರಿ ಪೂರೈಕೆಯಲ್ಲಿ ಕೊಂಚ ಇಳಿಕೆಯಾಗಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಲಕ್ಷ್ಮಮ್ಮ. 

ಯಾವುದು ಅಗ್ಗ?: ತೊಂಡೇಕಾಯಿ ಪ್ರತಿ ಕೆ.ಜಿ ₹10ಕ್ಕೆ ಮಾರಾಟವಾಗುತ್ತಿದೆ. ಈರುಳ್ಳಿ, ಆಲೂಗಡ್ಡೆ, ಬದನೆಕಾಯಿ, ನವಿಲುಕೋಸು ಪ್ರತಿ ಕೆ.ಜಿಗೆ ₹20ರಂತೆ ಮಾರಾಟವಾಗುತ್ತಿವೆ.

ರಂಜಾನ್‌ ಉಪವಾಸ ಇರುವುದರಿಂದ ಹಣ್ಣುಗಳು ದುಬಾರಿಯಾಗಿವೆ. ಕಳೆದ ವಾರ ದ್ರಾಕ್ಷಿ ಕೆ.ಜಿ. ಬೆಲೆ ₹80 ಇತ್ತು. ಈಗ ಅದು ₹120ಕ್ಕೆ ಏರಿಕೆಯಾಗಿದೆ. ಉಳಿದಂತೆ ಸೇಬು ₹150ರಿಂದ ₹170, ಮೂಸಂಬಿ ₹100, ಸಪೋಟ ₹60, ದಾಳಿಂಬೆ ಕೆ.ಜಿಗೆ ₹50ರಿಂದ ₹60ರಷ್ಟಿದೆ. 

‘ರಂಜಾನ್‌ ಇರುವುದರಿಂದ ಎಲ್ಲ ಹಣ್ಣುಗಳ ಬೆಲೆ ಏರಿಕೆಯಾಗಿದೆ. ಅದರಲ್ಲೂಸೇಬು ಹಾಗೂ ದ್ರಾಕ್ಷಿಯನ್ನು ಗ್ರಾಹಕರು ಹೆಚ್ಚಾಗಿ ಖರೀದಿಸುತ್ತಾರೆ. ಇದು ಮಾವು ಹೆಚ್ಚಾಗಿ ಬರುವ ಕಾಲ. ಹೀಗಾಗಿ ಉಳಿದ ಹಣ್ಣುಗಳ ಪ್ರಮಾಣ ಕಡಿಮೆಯಿದ್ದು ಬೆಲೆ ಏರಿಕೆಯಾಗಿದೆ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ತಬ್ರೇಜ್‌.

ತರಕಾರಿ ದರ (ಪ್ರತಿ ಕೆ.ಜಿಗೆ ₹ಗಳಲ್ಲಿ)

ಶುಂಠಿ;160–200

ಬೆಳ್ಳುಳ್ಳಿ;120

ಬೀನ್ಸ್‌;100

ಹಸಿ ಮೆಣಸಿನಕಾಯಿ;100

ಬಟಾಣಿ;100

ಹೀರೇಕಾಯಿ;80

ಬೆಂಡೇಕಾಯಿ;70

ಟೊಮೆಟೊ;40

ಕ್ಯಾರೆಟ್‌;40

ಹುರುಳಿ ಕಾಯಿ;40

ಕುಂಬಳಕಾಯಿ; 40

ಬದನೆಕಾಯಿ;30

ಮೂಲಂಗಿ;30

ಬೀಟ್‌ರೂಟ್‌;30 

ಆಲೂಗಡ್ಡೆ;20

ತೊಂಡೇಕಾಯಿ;10

ಹಣ್ಣುಗಳ ದರ (ಪ್ರತಿ ಕೆ.ಜಿಗೆ ₹ಗಳಲ್ಲಿ)

ಸೇಬು;150–170

ದ್ರಾಕ್ಷಿ;120

ಕಿತ್ತಳೆ;100

ಮಾವು;80–100

ಸಪೋಟ;60

ದಾಳಿಂಬೆ;50

*ಕೆ.ಆರ್‌.ಮಾರುಕಟ್ಟೆ ದರ

ಹಾಪ್‌ಕಾಮ್ಸ್‌ ದರಗಳು

ತರಕಾರಿ ದರ (ಪ್ರತಿ ಕೆ.ಜಿಗೆ ₹ಗಳಲ್ಲಿ)

ಬೆಳ್ಳುಳ್ಳಿ;140

ಬೀನ್ಸ್‌;92

ಬಟಾಣಿ;80

ಶುಂಠಿ;80

ಮೆಣಸಿನಕಾಯಿ;78

ಕ್ಯಾರೆಟ್‌;56

ಟೊಮೆಟೊ;42

ಹೂಕೋಸು;40

ಬೀಟ್‌ರೂಟ್‌;38

ಕುಂಬಳಕಾಯಿ;35

ಬ‌ದನೆಕಾಯಿ;35

ಬೆಂಡೆಕಾಯಿ;33

ಎಲೆಕೋಸು;32

ಆಲೂಗಡ್ಡೆ;28

ಈರುಳ್ಳಿ;20

 

ಹಣ್ಣುಗಳ ದರ (ಪ್ರತಿ ಕೆ.ಜಿಗೆ ₹ಗಳಲ್ಲಿ)

ಸೇಬು; 210

ದ್ರಾಕ್ಷಿ; 110

ಕಿತ್ತಳೆ;135

ಮಾವು;60-80

ಸಪೋಟ;49

ದಾಳಿಂಬೆ;112

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !