ಶುಕ್ರವಾರ, ಜೂಲೈ 10, 2020
21 °C

ಚುನಾವಣಾ ಆಯೋಗ ಉತ್ತಮವಾಗಿ ಕೆಲಸ ಮಾಡಿದೆ: ಪ್ರಣವ್‌ ಮುಖರ್ಜಿ

ಏಜನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಚುನಾವಣಾ ಆಯೋಗವು ಮೋದಿಗೆ ಶರಣಾಗಿದೆ ಎಂಬ ಕಾಂಗ್ರೆಸ್‌ ನಿಲುವಿಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ ಮೂಲಕ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ. ಚುನಾವಣಾ ಆಯೋಗ ಉತ್ತಮವಾಗಿ ಕೆಲಸ ಮಾಡಿದೆ ಎಂದು ಅವರು ಹೇಳಿದ್ದಾರೆ. 

ಎನ್‌ಡಿಟಿವಿಯ ಸಂಪಾದಕೀಯ ನಿರ್ದೇಶಕರಾದ ಸೋನಿಯಾ ಸಿಂಗ್‌ ಅವರ ‘Defining India Through Their Eyes’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಅವರು, ‘ ನಾವು ಸಾಂಸ್ಥಿಕವಾಗಿ ಬಲಗೊಳ್ಳಬೇಕಿದ್ದರೆ, ಸಾರ್ವಜನಿಕ ಸಂಸ್ಥೆಗಳು ಉತ್ತಮವಾಗಿ ಕೆಲಸ ಮಾಡಬೇಕು ಎಂಬುದನ್ನು ನಾವು ಗಮನದಲ್ಲಿ ಇಟ್ಟುಕೊಳ್ಳಬೇಕು. ಪ್ರಜಾಪ್ರಭುತ್ವ ಯಶಸ್ವಿಯಾಗಲು ಚುನಾವಣೆಗಳನ್ನು ಉತ್ತಮವಾಗಿ ಸಂಘಟಿಸುವ ಚುನಾವಣಾ ಆಯೋಗವೇ ಕಾರಣ. ಮೊದಲ ಚುನಾವಣಾ ಆಯುಕ್ತ ಸುಕುಮಾರ್‌ ಸೇನ್‌ ಅವರಿಂದ ಹಿಡಿದು ಇವತ್ತಿನ ಚುನಾವಣಾ ಆಯುಕ್ತರವರೆಗೆ ಎಲ್ಲರೂ ಅದರಲ್ಲಿ ಕಾರಣೀಭೂತರು. ಅವರೆಲ್ಲರೂ ನೇಮಕವಾಗಿದ್ದು, ಕಾರ್ಯಾಂಗದ ಮೂಲಕವೇ. ಅವರ ಕೆಲಸಗಳನ್ನು ಅವರು ನಿರ್ವಹಿಸಿದ್ದಾರೆ. ಅವರನ್ನು ನಾವು ಟೀಕಿಸಲು ಸಾದ್ಯವಿಲ್ಲ. ಚುನಾವಣಾ ಆಯೋಗ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದೆ,’ ಎಂದು ಅವರು ಹೇಳಿದ್ದಾರೆ. 

‘ನಮ್ಮ ಸಾಂಸ್ಥಿಕ ರಚನೆ ಉತ್ತಮವಾಗಿದೆ. ಈ ಸಂಸ್ಥೆಗಳು ಬಹಳ ಹಿಂದೆಯೇ ರಚನೆಯಾಗಿವೆ. ಕೆಟ್ಟ ಕೆಲಸಗಾರ ಮಾತ್ರ ತನ್ನೊಂದಿಗಿರುವ ಕಾರ್ಯ ಸಾಧನಗಳೊಂದಿಗೆ ಘರ್ಷಣೆ ಮಾಡಿಕೊಳ್ಳಬಲ್ಲ. ಆದರೆ, ಉತ್ತಮ ಕೆಲಸಗಾರನಿಗೆ ಯಾವ ಕಾರ್ಯ ಸಾಧನಗಳಿಂದ ಹೇಗೆ ಕೆಲಸ ಮಾಡಿಸಿಕೊಳ್ಳಬೇಕು ಎಂಬುದು ಗೊತ್ತಿರುತ್ತದೆ,’ ಎಂದು ಅವರು ಹೇಳಿದ್ದಾರೆ. 

ಮಾಜಿ ರಾಷ್ಟ್ರಪತಿ ಪ್ರಣಾಬ್‌ ಮುಖರ್ಜಿ ಅವರು 2018ರ ಜೂನ್‌ನಲ್ಲಿ ಆರ್‌ಎಸ್‌ಎಸ್‌ನ ‘ತೃತೀಯ ವರ್ಷ ಸಂಘ ಶಿಕ್ಷಣ ವರ್ಗ’ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು. ಆ ಮೂಲಕ ಕಾಂಗ್ರೆಸ್‌ ಪಾಳಯದಲ್ಲಿ ಅಚ್ಚರಿಗೆ ಕಾರಣವಾಗಿದ್ದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು