ಸ್ಕಾರ್ಫ್‌ ವಿವಾದ; ‘ಆ್ಯಗ್ನೆಸ್‌ ಕಾಲೇಜಿನ ವಿರುದ್ಧ ಹೋರಾಟ’

ಸೋಮವಾರ, ಜೂನ್ 17, 2019
31 °C
ವಿವಾದದಿಂದ ಕಾಲೇಜಿನಿಂದ ಹೊರಬಿದ್ದಿರುವ ವಿದ್ಯಾರ್ಥಿನಿ ಫಾತಿಮಾ

ಸ್ಕಾರ್ಫ್‌ ವಿವಾದ; ‘ಆ್ಯಗ್ನೆಸ್‌ ಕಾಲೇಜಿನ ವಿರುದ್ಧ ಹೋರಾಟ’

Published:
Updated:

ಮಂಗಳೂರು: ‘ಶಿರವಸ್ತ್ರ (ಸ್ಕಾರ್ಫ್‌) ಧರಿಸಿ ಕಾಲೇಜಿಗೆ ಬರಲು ಅವಕಾಶ ಕೋರಿದ ನನ್ನನ್ನು ಸೇಂಟ್‌ ಆ್ಯಗ್ನೆಸ್‌ ಕಾಲೇಜು ಆಡಳಿತ ಮಂಡಳಿ ವರ್ಗಾವಣೆ ಪತ್ರ ನೀಡಿ ಹೊರಹಾಕಿದೆ. ಕಾಲೇಜಿನ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ’ ಎಂದು ಕಾಲೇಜಿನಿಂದ ಹೊರಬಿದ್ದಿರುವ ವಿದ್ಯಾರ್ಥಿನಿ ಫಾತಿಮಾ ಫಝೀಲ ಹೇಳಿದರು.

ನಗರದ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆ್ಯಗ್ನೆಸ್‌ ಕಾಲೇಜಿನಲ್ಲೇ ಪ್ರಥಮ ಪಿಯುಸಿ ಓದಿ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದೇನೆ. ಆದರೆ, ದ್ವಿತೀಯ ಪಿಯುಸಿ ತರಗತಿಗೆ ಹೋದಾಗ ಶಿರವಸ್ತ್ರ ಧರಿಸಿ ಕಾಲೇಜಿಗೆ ಬರುತ್ತಿದ್ದೇನೆ ಎಂಬ ಕಾರಣ ನೀಡಿ ಹೊರಹಾಕಿದ್ದಾರೆ’ ಎಂದರು.

ಸ್ಕಾರ್ಫ್‌ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಯಾಗಿದೆ. ಸಮುದಾಯದ ಮುಖಂಡರು ಕಾಲೇಜಿನ ಆಡಳಿತ ಮಂಡಳಿಯ ಪ್ರಮುಖರನ್ನು ಭೇಟಿಮಾಡಿ ಮನವೊಲಿಸಲು ಯತ್ನಿಸಿದ್ದರು. ಆದರೆ, ಯಾವುದಕ್ಕೂ ಮಣಿಯದ ‌ಆಡಳಿತ ಮಂಡಳಿಯವರು ಮಂಗಳವಾರ ವರ್ಗಾವಣೆ ಪತ್ರ ನೀಡಿ ಹೊರ ಕಳುಹಿಸಿದ್ದಾರೆ. ಸಂವಿಧಾನದ ಮೂಲಕವೇ ದೊರಕಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನೂ ಕಾಲೇಜಿನ ಆಡಳಿತ ಮಂಡಳಿ ತಮಗೆ ನಿರಾಕರಿಸಿದೆ ಎಂದು ದೂರಿದರು.

‘ಪದವಿಪೂರ್ವ ವಿದ್ಯಾರ್ಥಿಗಳಿಗೆ ಸಮವಸ್ತ್ರದ ನಿಯಮ ಅನ್ವಯಿಸುವುದಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಸ್ಕಾರ್ಫ್‌ ಧರಿಸುವುದಕ್ಕೆ ಸಂಬಂಧಿಸಿದಂತೆ ಕಾಲೇಜಿನ ನಿಯಮವು ಸಂವಿಧಾನ ವಿರೋಧಿಯಾದುದು. ಈ ನೀತಿಯ ವಿರುದ್ಧ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತೇನೆ’ ಎಂದರು.

ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಪರಿಹರಿಸಬೇಕಾಗಿದ್ದ ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮೌನಕ್ಕೆ ಶರಣಾಗಿದ್ದಾರೆ. ಇವರೆಲ್ಲರೂ ಪರೋಕ್ಷವಾಗಿ ಕಾಲೇಜು ಆಡಳಿತ ಮಂಡಳಿಯ ಪರ ಇದ್ದಾರೆ ಎನ್ನುವ ಸಂಶಯ ಮೂಡಿದೆ. ಕಾಲೇಜಿನ ಅಸಾಂವಿಧಾನಿಕವಾದ ಈ ನಿಯಮ, ಜಿಲ್ಲಾಡಳಿತ ಹಾಗೂ ಸಚಿವರ ಮೌನ ಖಂಡಿಸಿ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಫಾತಿಮಾ ಅವರ ತಾಯಿ ಮುಮ್ತಾಝ್‌ ಮತ್ತು ಸಹೋದರ ನವಾಲ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !