ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ಸಿಕ್ಕವು 8 ಚಮಚ, 2 ಬ್ರಷ್‌, 1 ಚಾಕು, ಇನ್ನಷ್ಟು!

ಮಂಗಳವಾರ, ಜೂನ್ 18, 2019
30 °C

ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ಸಿಕ್ಕವು 8 ಚಮಚ, 2 ಬ್ರಷ್‌, 1 ಚಾಕು, ಇನ್ನಷ್ಟು!

Published:
Updated:

ಮಂಡಿ: ಹಿಮಾಚಲಪ್ರದೇಶದ ಶ್ರೀ ಲಾಲ್‌ ಬಹದ್ದೂರ್‌ ಶಾಸ್ತ್ರಿ ಆಸ್ಪತ್ರೆಗೆ ಹೊಟ್ಟೆ ನೋವೆಂದು ದಾಖಲಾಗಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿದ ವೈದ್ಯರು ಆಶ್ಚರ್ಯಕ್ಕೀಡಾದ ವಿಲಕ್ಷಣ ಪ್ರಸಂಗವೊಂದು ಇತ್ತೀಚೆಗೆ ನಡೆದಿದೆ. 

ತೀವ್ರ ಹೊಟ್ಟೆ ನೋವಿನೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯನ್ನು ಪರೀಕ್ಷಿಸಿದಾಗ, ವ್ಯಕ್ತಿಯ ಹೊಟ್ಟೆಯಲ್ಲಿ ವಸ್ತುಗಳಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಎಕ್ಸ್‌ ರೇ ಮಾಡಿಸಿದಾಗ ಅಲ್ಲಿ ಚಮಚಗಳು ಕಂಡಿವೆ. ಇದರಿಂದ ಗಾಭರಿಗೊಂಡ ವೈದ್ಯರು ಕೂಡಲೇ ವ್ಯಕ್ತಿಗೆ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ. ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರಿಗೆ ಆಶ್ಚರ್ಯ ಕಾದಿತ್ತು. ಏಕೆಂದರೆ, ಹೊಟ್ಟೆಯಲ್ಲಿ 8 ಚಮಚಗಳು, 2 ಸ್ಕ್ರ್ಯೂ ಡ್ರೈವರ್‌ಗಳು, 2 ಹಲ್ಲುಜ್ಜುವ ಬ್ರಷ್‌ಗಳು, ಒಂದು ಚಾಕು ಪತ್ತೆಯಾಗಿವೆ. 

ಈ ಕುರಿತು ಮಾತನಾಡಿರುವ ಆಸ್ಪತ್ರೆಯ ವೈದ್ಯ ನಿಖಿಲ್‌, ‘ಹೊಟ್ಟೆ ನೋವೆಂದು ಬಂದಿದ್ದ ರೋಗಿಯ ಹೊಟ್ಟೆಯಲ್ಲಿ ವಸ್ತುಗಳಿರುವುದು ನಮಗೆ ಗೊತ್ತಾಗಿತ್ತು. ಹೀಗಾಗಿ ನಾವು ಕೂಡಲೇ ಶಸ್ತ್ರ ಚಿಕಿತ್ಸೆ ನಡೆಸಿದೆವು. ಸದ್ಯ ಅವರು ಆರೋಗ್ಯವಾಗಿದ್ದಾರೆ. ವ್ಯಕ್ತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಇದರೊಂದು ವಿಲಕ್ಷಣ ಪ್ರಸಂಗ,’ ಎಂದು ಅವರು ಹೇಳಿಕೊಂಡಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 4

  Sad
 • 3

  Frustrated
 • 2

  Angry

Comments:

0 comments

Write the first review for this !