ಬುಧವಾರ, 28–5–1969

ಗುರುವಾರ , ಜೂನ್ 27, 2019
23 °C

ಬುಧವಾರ, 28–5–1969

Published:
Updated:

ಕಾಂಗ್ರೆಸ್ಸಿಗೆ ಪ್ರತಿ ಪಕ್ಷ ರಚಿಸುವ ಚರ್ಚೆ ವಿಫಲ?
ನವದೆಹಲಿ, ಮೇ 27–
ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಹೊಸ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಪ‍ಕ್ಷ ಸ್ಥಾಪಿಸುವ ಸಂಬಂಧದಲ್ಲಿ ಜನಸಂಘ, ಭಾರತೀಯ ಕ್ರಾಂತಿದಳ ಮತ್ತು ಸ್ವತಂತ್ರ ಪಕ್ಷದ ನಾಯಕರ ನಡುವೆ ಕಳೆದ ಎರಡು ದಿನಗಳಿಂದ ನಡೆದ ಮಾತುಕತೆ ಮುರಿದು ಬಿದ್ದಿದೆಯೆಂದು ತಿಳಿದು ಬಂದಿದೆ.

ಮೂಲಭೂತ ವಿಷಯಗಳಿಗೆ ಸಂಬಂಧಿಸಿದಂತೆ ಈ ಮೂರು ಪಕ್ಷಗಳ ನಡುವೆ ರಾಜಿಗೆ ಸಾಧ್ಯವಾಗದಂಥ ಭಿನ್ನಾಭಿಪ್ರಾಯಗಳು ಉದ್ಭವಿಸಿದ್ದೇ ಮಾತುಕತೆ ವಿಫಲಗೊಳ್ಳಲು ಕಾರಣವೆಂದು ಹೇಳಲಾಗಿದೆ.

ಗಗನಯಾತ್ರಿಗಳಿಗೆ ವೀರೋಚಿತ ಸ್ವಾಗತ
ಸ್ಪೇಸ್‌ಸೆಂಟರ್, ಮೇ 27–
ಸಮೋವದಿಂದ ಹಿಂದಿರುಗಿದ ಅಪೊಲೊ–10ರ ಗಗನಯಾತ್ರಿಗಳಿಗೆ ವೀರೋಚಿತ ಸ್ವಾಗತ. ಈ ವರ್ಷ ಯಾವಾಗ ಮಾನವ ಚಂದ್ರನಲ್ಲಿ ಇಳಿಯುತ್ತಾನೆ ಎಂದು ನಿರ್ಧರಿಸಬಲ್ಲ ವರದಿಯನ್ನು ಅವರು ನೀಡುವರು.

ಕೇವಲ ಒಂದು ದಿನದ ಹಿಂದೆ ಚಂದ್ರನಿಂದ ವಾಪಸಾದ ಗಗನಯಾತ್ರಿಗಳು ಸಮೋವದಿಂದ ಎಲ್ಲೂ ನಿಲ್ಲದೆ ವಿಮಾನದಲ್ಲಿ ಬಂದಿಳಿದಾಗ ಬ್ಯಾಂಡ್ ವಾದ್ಯ ನುಡಿಸಲಾಯಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !