ಗುರುವಾರ , ಡಿಸೆಂಬರ್ 3, 2020
19 °C

ಪಿಎಚ್‌.ಡಿ ಪ್ರಬಂಧಗಳ ಗುಣಮಟ್ಟಪರಿಶೀಲನೆಗೆ ಯುಜಿಸಿ ಅಧ್ಯಯನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪಿಎಚ್‌.ಡಿ ಸಂಶೋಧನಾ ಪ್ರಬಂಧಗಳ ಗುಣಮಟ್ಟ ಅಧ್ಯಯನ ಮಾಡಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿರ್ಧರಿಸಿದೆ. 

ಕಳೆದ ಹತ್ತು ವರ್ಷಗಳಿಂದ ಕೇಂದ್ರ, ರಾಜ್ಯ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಮಂಡನೆಯಾದ ಸಂಶೋಧನಾ ಪ್ರಬಂಧಗಳು ಅಧ್ಯಯನ ವ್ಯಾಪ್ತಿಗೆ ಬರಲಿವೆ ಎಂದು ಯುಜಿಸಿ ಉನ್ನತ ಶಿಕ್ಷಣ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.  

ವಿಷಯಗಳ ಪುನರಾವರ್ತನೆ, ನಕಲು ತಡೆಗಟ್ಟಲು ಮತ್ತು ಗುಣಮಟ್ಟ ಕಾಪಾಡಲು ಈ ಅಧ್ಯಯನ ಸಹಾಯ ಮಾಡಲಿದ್ದು, ವರದಿಯನ್ನು ಆರು ತಿಂಗಳ ಒಳಗೆ ಸಿದ್ಧಪಡಿಸಲಾಗುವುದು ಎಂದಿದ್ದಾರೆ.

ಈ ಅಧ್ಯಯನದ ಕುರಿತು ಆಸಕ್ತರು ತಮ್ಮ ಅಭಿಪ್ರಾಯ, ಸಾಮರ್ಥ್ಯ, ಕಾರ್ಯವಿಧಾನ ಮಾಹಿತಿಯನ್ನು ಆಯೋಗದೊಂದಿಗೆ ಹಂಚಿಕೊಳ್ಳಬಹುದು ಪ್ರಕಟಣೆಯಲ್ಲಿ ತಿಳಿಸಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು