ಸೋಮವಾರ, ಮಾರ್ಚ್ 30, 2020
19 °C
ರಷ್ಯಾ ಎಸ್‌–400ರ ಖರೀದಿ ಒಪ್ಪಂದ

ಅಮೆರಿಕದ ಜತೆಗಿನ ರಕ್ಷಣಾ ಸಂಬಂಧಗಳ ಮೇಲೆ ಪರಿಣಾಮ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ರಷ್ಯಾದಿಂದ ಎಸ್‌–400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸುವ ಭಾರತದ ನಿರ್ಧಾರವು ಅಮೆರಿಕದೊಂದಿಗಿನ ರಕ್ಷಣಾ ಸಂಬಂಧಗಳ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂದು ಟ್ರಂಪ್‌ ಆಡಳಿತ ಎಚ್ಚರಿಸಿದೆ.

ರಷ್ಯಾದ ಅತ್ಯಾಧುನಿಕ ಸುದೀರ್ಘ ಶ್ರೇಣಿಯ ಎಸ್‌–400 ವಾಯುಪ್ರದೇಶ ರಕ್ಷಣಾ ಕ್ಷಿಪಣಿ ವ್ಯವಸ್ಥೆಯಾಗಿದೆ. 2014ರಲ್ಲಿ ಈ ಕ್ಷಿಪಣಿ ವ್ಯವಸ್ಥೆಯನ್ನು ಚೀನಾ ಖರೀದಿಸಿತ್ತು.

ಈ ರಕ್ಷಣಾ ವ್ಯವಸ್ಥೆ ಖರೀದಿ (5 ಬಿಲಿಯನ್‌ ಅಮೆರಿಕನ್‌ ಡಾಲರ್‌) ಸಂಬಂಧ ಭಾರತ ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಷ್ಯಾ ಜತೆ ಒಪ್ಪಂದಕ್ಕೆ ಸಹಿ ಹಾಕಿತ್ತು.

ಈ ಖರೀದಿ ಸಂಬಂಧ ದೆಹಲಿಯ ನಿರ್ಧಾರ ಮಹತ್ವದ್ದಾಗಿದೆ. ಆದರೆ ಅದು ‘ಒಂದು ದೊಡ್ಡ ವ್ಯವಹಾರವಲ್ಲ’ ಎಂಬ ಭಾರತದ ಅಭಿಪ್ರಾಯ ಒಪ್ಪತಕ್ಕದ್ದಲ್ಲ’ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಭಾರತ ಮತ್ತು ಅಮೆರಿಕ ನಡುವಿನ ಬಹುಕಾಲದ ರಕ್ಷಣಾ ಸಂಬಂಧಗಳ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂಬ ಭಾರತದ ವಾದವೂ ಸರಿಯಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು