ವೋಟಿಗಾಗಿ ನೋಟು: ಅಧಿಕೃತ ಮುದ್ರೆ?

ಬುಧವಾರ, ಜೂನ್ 26, 2019
24 °C

ವೋಟಿಗಾಗಿ ನೋಟು: ಅಧಿಕೃತ ಮುದ್ರೆ?

Published:
Updated:

ಕೇಂದ್ರ ಸರ್ಕಾರದ ‘ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯ ಅಂಕಿಅಂಶಗಳು ಕೃಷಿಕರಲ್ಲಿ ರೋಮಾಂಚನ ಉಂಟು ಮಾಡಿದಂತೆ ತೋರುತ್ತದೆ. ಆದರೂ ವಾರ್ಷಿಕ ₹ 6 ಸಾವಿರದ ನೆರವಿನ ಈ ಮೊತ್ತವನ್ನು ಪ್ರತಿ ದಿನಕ್ಕೆ ಭಾಗಿಸಿದಾಗ, ಹದಿನಾರೂವರೆ ರೂಪಾಯಿಗಿಂತ ಕಡಿಮೆಯಾಗುತ್ತದೆ. ಒಂದು ಬೀಡಿ ಕಟ್ಟಿನ ಬೆಲೆ ಇದಕ್ಕಿಂತ ಜಾಸ್ತಿ ಇದೆ!

ಮಳೆ ಕಡಿಮೆಯಾಗಿ, ಅಂತರ್ಜಲವೂ ಬರಿದಾಗುತ್ತಿರುವ ಈ ಹೊತ್ತಿನಲ್ಲಿ, ಕೃಷಿಯನ್ನು ಪರ್ಯಾಯ ಮಾರ್ಗದತ್ತ ಡೊಯ್ಯಬೇಕಾಗಿದೆ. ಕೃಷಿಯು ಇನ್ನು ಮುಂದೆ ನೀರಿನ ಮಿತ ಬಳಕೆ ಹಾಗೂ ಮಳೆನೀರಿನ ಸಂರಕ್ಷಣೆಯಲ್ಲಿ ಸಾಗಬೇಕಾದ ಅನಿವಾರ್ಯ ಸ್ಥಿತಿ ಇದೆ. ಇದಕ್ಕೆ ಬೇಕಾದ ತಂತ್ರಜ್ಞಾನ, ನೆರವು, ಮಾರ್ಗದರ್ಶನ ಹಾಗೂ ಉತ್ತೇಜನ ಸರ್ಕಾರದಿಂದ ಸಿಗಬೇಕು. ಹಸಿರುಕ್ರಾಂತಿಯ ಹೆಸರಿನಲ್ಲಿ ರಸಗೊಬ್ಬರ, ರಾಸಾಯನಿಕಗಳನ್ನು ರೈತನ ಮೇಲೆ ಹೇರಿದ್ದರಿಂದ ಆದ ಅನಾಹುತಗಳಿಂದ ಆತನನ್ನು ಪಾರು ಮಾಡಿ, ಸುಸ್ಥಿರ ಕೃಷಿಯತ್ತ ಹೊರಳಿಸಬೇಕಾದ ಹೊಣೆಗಾರಿಕೆಯೂ ಸರ್ಕಾರದ ಮೇಲಿದೆ.

ಇಂಥ ಗುರುತರ ಹೊಣೆಗಾರಿಕೆ ಹೊರಬೇಕಾದ ಸಂದರ್ಭದಲ್ಲಿ, ಮೂಗಿಗೆ ತುಪ್ಪ ಸವರುವ ಪುಡಿಗಾಸಿನಿಂದ ಕೃಷಿಕನಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ನಾಡಿನ ಜನ ಯಾವುದೇ ವೃತ್ತಿಯಲ್ಲಿ ತೊಡಗಿದ್ದರೂ ಅವರವರ ಅಗತ್ಯಗಳಿಗೆ ಸ್ವತಃ ದುಡಿದುಕೊಳ್ಳುವ ಶಕ್ತಿ ಹೊಂದಿರುತ್ತಾರೆ. ಅವರ ದುಡಿಮೆಯ ದಾರಿ ವಿಸ್ತರಿಸುವ ಕೆಲಸ ಸರ್ಕಾರಗಳಿಂದ ಆಗಬೇಕೇ ಹೊರತು, ವೋಟಿಗಾಗಿ ನೋಟು ಕೊಡುವ ಅನಿಷ್ಟ ಪದ್ಧತಿಗೆ ಹೀಗೆ ಅಧಿಕೃತ ಮುದ್ರೆ ಒತ್ತಬಾರದು.

ಟಿ.ಎಂ.ಕೃಷ್ಣ, ಬೆಂಗಳೂರು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !