ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಚಿಕ್ಕಮಗಳೂರು ಜಿಲ್ಲೆಯ ಯುವತಿಯ ಕೊಲೆ ಪ್ರಕರಣದ ಆರೋಪಿಯ ಬಂಧನ

Last Updated 8 ಜೂನ್ 2019, 8:32 IST
ಅಕ್ಷರ ಗಾತ್ರ

ಮಂಗಳೂರು: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಅಂಜನಾ ವಸಿಷ್ಠ್‌ (22) ಎಂಬ ಯುವತಿಯನ್ನು ತನ್ನ ಕೊಠಡಿಯಲ್ಲಿ ಶುಕ್ರವಾರ ಕೊಲೆ ಮಾಡಿ ಪರಾರಿಯಾಗಿದ್ದ ಸಂದೀಪ್‌ ರಾಥೋಡ್ ಎಂಬಾತನನ್ನು ನಗರ ಪೊಲೀಸರು ಶನಿವಾರ ಬೆಳಿಗ್ಗೆ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಬಂಧಿಸಿದ್ದಾರೆ.

ಅಂಜನಾ ಮೃತದೇಹ ಸಂದೀಪ್‌ ರಾಥೋಡ್‌ನ ಅತ್ತಾವರದ ಬಾಡಿಗೆ ಕೊಠಡಿಯಲ್ಲಿ ಶುಕ್ರವಾರ ಪತ್ತೆಯಾಗಿತ್ತು. ಸಿಂಧಗಿ ತಾಲ್ಲೂಕಿನ ಬೆನಕೋಟಗಿ ತಾಂಡಾ ನಿವಾಸಿಯಾಗಿರುವ ಸಂದೀಪ್‌ ಮೊಬೈಲ್‌ ಸ್ವಿಚ್ ಆಫ್‌ ಮಾಡಿಕೊಂಡು ಪರಾರಿಯಾಗಿದ್ದ. ಆರೋಪಿಯನ್ನು ಬೆನ್ನಟ್ಟಿ ಹೋದ ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆ ಪೊಲೀಸರು, ಶನಿವಾರ ಬೆಳಿಗ್ಗೆ ಬಂಧಿಸಿದ್ದಾರೆ.

ಮೃತ ಯುವತಿಯು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಎಂಎಸ್ಸಿ ವ್ಯಾಸಂಗ ಪೂರ್ಣಗೊಳಿಸಿದ್ದಳು. ಬ್ಯಾಂಕಿಂಗ್‌ ಪರೀಕ್ಷೆಯ ತರಬೇತಿಯ ಕಾರಣ ನೀಡಿ ಗುರುವಾರ ತರೀಕೆರೆಯ ಮನೆಯಿಂದ ಮಂಗಳೂರಿಗೆ ಬಂದಿದ್ದಳು. ಸಂದೀಪ್‌ ರಾಥೋಡ್‌ ಸಬ್‌ ಇನ್‌ಸ್ಪೆಕ್ಟರ್‌ ಪರೀಕ್ಷೆಯ ತರಬೇತಿಗಾಗಿ ನಗರಕ್ಕೆ ಬಂದಿದ್ದ. ಇಬ್ಬರೂ ಪ್ರೀತಿಸಿ, ಕೆಲವು ದಿನಗಳ ಹಿಂದೆ ವಿವಾಹವಾಗಿದ್ದರು ಎಂಬುದು ಪ್ರಾಥಮಿಕ ತನಿಖೆಯ ವೇಳೆ ಗೊತ್ತಾಗಿದೆ.

ಗುರುವಾರ ಊರಿನಿಂದ ನಗರಕ್ಕೆ ಬಂದಿದ್ದ ಅಂಜನಾ, ಶುಕ್ರವಾರ ಬೆಳಿಗ್ಗೆ ಸಂದೀಪ್‌ನ ಕೊಠಡಿಗೆ ಬಂದಿದ್ದಳು. ಅಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಆಗ ಮಲಗುವ ಮಂಚದ ಮೇಲೆ ವಯರ್‌ನಿಂದ ಉಸಿರುಗಟ್ಟಿಸಿ ಆಕೆಯನ್ನು ಕೊಲೆ ಮಾಡಿದ ಆತ, ಬಳಿಕ ಸ್ಥಳದಿಂದ ಪರಾರಿಯಾಗಿದ್ದ. ಕೊಠಡಿಯಲ್ಲಿ ಆತನ ಗುರುತಿನ ಚೀಟಿ ಸೇರಿದಂತೆ ಯಾವುದೇ ಮಾಹಿತಿಯೂ ಇರಲಿಲ್ಲ. ತಕ್ಷಣವೇ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT