ರಾಜ್ಯದ ಕೆಎಂಎಫ್ 'ನಂದಿನಿ' ಹಾಲಿಗೆ ದೆಹಲಿಯಲ್ಲಿ ಬೇಡಿಕೆ

ಬುಧವಾರ, ಜೂನ್ 26, 2019
23 °C
ರೈಲಿನಲ್ಲಿ ಪ್ರಾಯೋಗಿಕವಾಗಿ 1 ಲಕ್ಷ ಲೀಟರ್ ಕಳುಹಿಸಿದ ಕೆಎಂಎಫ್‌

ರಾಜ್ಯದ ಕೆಎಂಎಫ್ 'ನಂದಿನಿ' ಹಾಲಿಗೆ ದೆಹಲಿಯಲ್ಲಿ ಬೇಡಿಕೆ

Published:
Updated:

ಬೆಂಗಳೂರು: ರಾಜ್ಯದ ಹಸುವಿನ ಹಾಲಿಗೆ ದೇಶದ ರಾಜಧಾನಿಯಲ್ಲಿ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಪ್ರಾಯೋಗಿಕವಾಗಿ 1 ಲಕ್ಷ ಲೀಟರ್‌ ಹಾಲನ್ನು ದೆಹಲಿಗೆ ಕಳುಹಿಸಲಾಗಿದೆ.

ದೆಹಲಿಯ ಮದರ್ ಡೇರಿ ಅಲ್ಲಿನ ಗ್ರಾಹಕರಿಗೆ ಸ್ಯಾಚೆಟ್‌ಗಳಲ್ಲಿ ಹಸುವಿನ ಹಾಲನ್ನು ಪೂರೈಸುತ್ತಿದೆ. ಬೇಡಿಕೆಗೆ ತಕ್ಕಷ್ಟು ಹಸುವಿನ ಹಾಲು ಅಲ್ಲಿ ಲಭ್ಯವಿಲ್ಲದ ಕಾರಣ ಕೆಎಂಎಫ್‌ಗೆ ಬೇಡಿಕೆ ಸಲ್ಲಿಸಿದೆ. ರೆಣಿಗುಂಟ ರೈಲು ನಿಲ್ದಾಣದಿಂದ 43 ಸಾವಿರ ಲೀಟರ್ ಸಾಂದ್ರೀಕರಿಸಿದ ಹಾಲನ್ನು (ಒಂದು ಲಕ್ಷ ಲೀಟರ್ ಹಾಲಿಗೆ ಸಮಾನ) ಇದೇ 8ರಂದು ಕಳುಹಿಸಲಾಗಿದೆ ಎಂದು ಕೆಎಂಎಫ್‌ ಮಾರುಕಟ್ಟೆ ನಿರ್ದೇಶಕ ಮೃತ್ಯುಂಜಯ ಟಿ. ಕುಲಕರ್ಣಿ ತಿಳಿಸಿದ್ದಾರೆ.

29 ವರ್ಷಗಳ ಹಿಂದೆ ದೆಹಲಿ ಮದರ್ ಡೇರಿಗೆ ಕರ್ನಾಟಕದಿಂದ ಹಾಲು ಕಳುಹಿಸಲಾಗುತ್ತಿತ್ತು. ಅಲ್ಲಿಂದ ಕೋಲ್ಕತ್ತ ನಗರಕ್ಕೆ  ಸರಬರಾಜಾಗುತ್ತಿತ್ತು. ಆದರೆ, ಕಾರಣಾಂತರದಿಂದ ಸ್ಥಗಿತಗೊಂಡಿತ್ತು. ಈಗ ರಾಜ್ಯದ ಹಸುವಿನ ಹಾಲಿಗೆ ದೆಹಲಿಯಲ್ಲಿ ಮಾರುಕಟ್ಟೆ ಸೃಷ್ಟಿಯಾಗುತ್ತಿರುವುದು ಸಂತಸದ ಸಂಗತಿ ಎಂದು ಅವರು ತಿಳಿಸಿದ್ದಾರೆ.

‘ಮಂಡ್ಯ ಜಿಲ್ಲೆಯಲ್ಲಿ ಸಂಗ್ರಹಿಸಿದ ಹಸುವಿನ ಹಾಲನ್ನು 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಇರಿಸಿ ಕಳುಹಿಸಲಾಗಿದೆ. ರೈಲು ಸೋಮವಾರ ಬೆಳಿಗ್ಗೆ ನವದೆಹಲಿ ತಲುಪಿದೆ. ಸಾಂದ್ರೀಕರಿಸುವ ಸಂದರ್ಭದಲ್ಲಿ ನೀರಿನ ಅಂಶವನ್ನು ತೆಗೆಯಲಾಗಿದ್ದು, ದೆಹಲಿಯ ಮದರ್ ಡೈರಿಯಲ್ಲಿ ಮತ್ತೆ ಅದಕ್ಕೆ ನೀರಿನ ಅಂಶ ಸೇರಿಸಿ ಸಾಮಾನ್ಯ ರೂಪಕ್ಕೆ ತರಲಾಗುತ್ತದೆ. ಬಳಿಕ ಗ್ರಾಹಕರಿಗೆ ಪೂರೈಸಲಾಗುತ್ತದೆ’ ಎಂದು ಕೆಎಂಎಫ್ ಅಧಿಕಾರಿಯೊಬ್ಬರು ‘‍‍ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪ್ರಯೋಗ ಯಶಸ್ವಿಯಾದರೆ ಪ್ರತಿನಿತ್ಯ 2 ಲಕ್ಷ ಲೀಟರ್ ಹಾಲು ದೆಹಲಿಗೆ ಸರಬರಾಜಾಗಲಿದೆ. ಕೆಎಂಎಫ್ ಪ್ರತಿನಿತ್ಯ ಸರಾಸರಿ 76 ಲಕ್ಷ ಲೀಟರ್ ಹಾಲನ್ನು ಶೇಖರಣೆ ಮಾಡುತ್ತಿದೆ. ನಂದಿನಿ ಹಾಲು, ತುಪ್ಪ, ಮಜ್ಜಿಗೆ ಹಾಗೂ ಹಾಲಿನ ಉತ್ಪನ್ನಗಳಿಗೆ ಬಳಕೆಯಾಗಿ ಉಳಿಯುವ 13ರಿಂದ 14 ಲಕ್ಷ ಲೀಟರ್‌ನಲ್ಲಿ ಹಾಲಿನ ಪುಡಿ ಉತ್ಪಾದಿಸಲಾಗುತ್ತಿದೆ.

ದೆಹಲಿಗೆ 2 ಲಕ್ಷ ಲೀಟರ್ ಕಳುಹಿಸಿದರೆ ನಮಗೆ ಹಾಲಿನ ಕೊರತೆಯಾಗುವುದಿಲ್ಲ, ಬದಲಾಗಿ ಮಾರುಕಟ್ಟೆ ವಿಸ್ತರಣೆ ಆದಂತಾಗಲಿದೆ’ ಎಂದು ಅವರು ವಿವರಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !