ಕಸದಿಂದ ವಿದ್ಯುತ್‌: ಎನ್‌ಜಿಟಿಯಿಂದ ಘಟಕ ಪರಿಶೀಲನೆ ಶೀಘ್ರ

ಶುಕ್ರವಾರ, ಜೂನ್ 21, 2019
24 °C
ಎಲೆಕ್ಟ್ರಾನಿಕ್‌ ಸಿಟಿ ಬಳಿ ಚಿಕ್ಕನಾಗಮಂಗಲದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಬಿಬಿಎಂಪಿ

ಕಸದಿಂದ ವಿದ್ಯುತ್‌: ಎನ್‌ಜಿಟಿಯಿಂದ ಘಟಕ ಪರಿಶೀಲನೆ ಶೀಘ್ರ

Published:
Updated:

ಬೆಂಗಳೂರು: ಕಸದಿಂದ ವಿದ್ಯುತ್‌ ಉತ್ಪಾದಿಸುವ ಘಟಕ (ಡಬ್ಲ್ಯುಟಿಇ) ನಿರ್ಮಿಸಲು ಉದ್ದೇಶಿಸಲಾಗಿರುವ ಚಿಕ್ಕನಾಗಮಂಗಲಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯ ಸಮಿತಿ ಶೀಘ್ರ ಭೇಟಿ ನೀಡಲಿದೆ. 

ಬಿಬಿಎಂಪಿಯು ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಚಿಕ್ಕನಾಗಮಂಗಲದಲ್ಲಿ ಡಬ್ಲ್ಯುಟಿಇ ಘಟಕ ನಿರ್ಮಿಸಲು ಮುಂದಾಗುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಎನ್‌ಜಿಟಿ ಸಮಿತಿಗೆ ದೂರು ನೀಡಿದ್ದರು. ಈ ಘಟಕಗಳ ನಿರ್ಮಾಣದ ಬಗ್ಗೆ ಮೂರು ಕಂಪನಿಗಳೊಂದಿಗೆ ಬಿಬಿಎಂಪಿಯು ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ಇನ್ನು ಮೂರು ತಿಂಗಳಲ್ಲಿ ಈ ಘಟಕಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಈ ಘಟಕ ತಲೆ ಎತ್ತಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬ ಕಾರಣಕ್ಕೆ ಸ್ಥಳೀಯರು ಇದನ್ನು ವಿರೋಧಿಸುತ್ತಿದ್ದಾರೆ. 

‘ಕಸವನ್ನು ದಹಿಸುವುದು ಈ ಘಟಕದ ಮೂಲ ಕಾರ್ಯ. ಇಂತಹ ಕಸ ಸುಡುವ ವೇಳೆ ವಿಷಕಾರಿ ಅನಿಲ ಬಿಡುಗಡೆಯಾಗುತ್ತದೆ. ಈ ರೀತಿಯ ಘಟಕಗಳು ಈವರೆಗೆ ಭಾರತದಲ್ಲಿ ಯಶಸ್ವಿಯಾಗಿಲ್ಲ. ಅದರ ಬದಲು, ಪರಿಸರಕ್ಕೆ ದೊಡ್ಡ ಮಟ್ಟದ ಹಾನಿಯುಂಟು ಮಾಡುತ್ತವೆ. ಬೇರೆ ರಾಜ್ಯಗಳು ಮಾಡಿದ ತಪ್ಪಿನಿಂದ ನಾವು ಕಲಿಯಬೇಕು. ನಮ್ಮಿಂದಲೂ ಅದೇ ತಪ್ಪು ಆಗಬಾರದು’ ಎಂದು ಎಲೆಕ್ಟ್ರಾನಿಕ್‌ ಸಿಟಿ ನಿವಾಸಿ ಪ್ರಣಯ್‌ ದುಬೆ ಹೇಳುತ್ತಾರೆ. 

ಡಬ್ಲ್ಯುಟಿಇ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾದರೆ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದರು. ಆದರೆ, ಘಟಕ ನಿರ್ಮಾಣವನ್ನು ಸಮರ್ಥಿಸಿಕೊಳ್ಳುವ ಬಿಬಿಎಂಪಿ ಅಧಿಕಾರಿಗಳು, ‘ಮಹಾನಗರದಲ್ಲಿ ಹೆಚ್ಚಿರುವ ಕಸದ ಸಮಸ್ಯೆಗೆ ಈ ಘಟಕ ನಿರ್ಮಾಣದಿಂದ ಪರಿಹಾರ ಸಿಗುತ್ತದೆ. ಅಲ್ಲದೆ, ವಿದ್ಯುತ್‌ ರೂಪದಲ್ಲಿ ಕಸವನ್ನು ರಸವನ್ನಾಗಿಸುವ ಅವಕಾಶ ಸಿಗುತ್ತದೆ’ ಎನ್ನುತ್ತಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !