ಜಿಂದಾಲ್‌ ದರದಲ್ಲೇ ರೈತರಿಗೆ ಭೂಮಿಗೆ ಒತ್ತಾಯ

ಬುಧವಾರ, ಜೂನ್ 26, 2019
23 °C

ಜಿಂದಾಲ್‌ ದರದಲ್ಲೇ ರೈತರಿಗೆ ಭೂಮಿಗೆ ಒತ್ತಾಯ

Published:
Updated:

ಬೆಂಗಳೂರು: ‘ಜಿಂದಾಲ್ ಕಂಪನಿಗೆ ನಿಗದಿ ಮಾಡಿರುವ ದರದಲ್ಲೇ ಆ ಭಾಗದ ರೈತರಿಗೆ ತಲಾ ಮೂರು ಎಕರೆಯಂತೆ ಭೂಮಿ ನೀಡಬೇಕು’ ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕ ಅಧ್ಯಕ್ಷ ಶಿವಾನಂದ ಗುರುಮಠ, ‘ರಾಜ್ಯದಲ್ಲಿರುವ ಶೇ 30ರಷ್ಟು ಬಡವರಿಗೆ ಮನೆ ಕಟ್ಟಿಕೊಳ್ಳಲು ಒಂದು ಗುಂಟೆ ಜಾಗ ಕೊಡಲು ಸರ್ಕಾರ ಹಿಂದೆ ಮುಂದೆ ನೋಡುತ್ತದೆ. ಆದರೆ, ಜಿಂದಾಲ್‌ ಕಂಪನಿಗೆ ಧಾರಾಳವಾಗಿ ಜಮೀನು ನೀಡಲು ಮುಂದಾಗಿರುವ ಸರ್ಕಾರದ ಹಿಂದಿನ ಮರ್ಮವೇನು’ ಎಂದು ಪ್ರಶ್ನಿಸಿದರು. 

‘ರೈತರ ಸಭೆ ಕರೆದು ಕಬ್ಬಿಗೆ ದರ ನಿಗದಿ ಮಾಡಬೇಕು. ವಾರದ ಒಳಗೆ ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿ ಹಣ ಕೊಡಿಸದಿದ್ದರೆ ಕಬ್ಬು ಕಾರ್ಖಾನೆಗಳಿಗೆ ಬೀಗ ಜಡಿಯುತ್ತೇವೆ’ ಎಂದು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !