ಭಾರತ–ಪಾಕ್‌ ಕ್ರಿಕೆಟ್‌ ‘ಕಿಕ್‌’

ಗುರುವಾರ , ಜೂಲೈ 18, 2019
29 °C

ಭಾರತ–ಪಾಕ್‌ ಕ್ರಿಕೆಟ್‌ ‘ಕಿಕ್‌’

Published:
Updated:

ಭಾರತ–ಪಾಕಿಸ್ತಾನ ಕ್ರಿಕೆಟ್‌ ತಂಡಗಳು ಮೈದಾನಕ್ಕೆ ಇಳಿದರೆ ಇಡೀ ವಿಶ್ವದ ಗಮನವೇ ಅತ್ತ ನೆಟ್ಟಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅಪರೂಪಕ್ಕೊಮ್ಮೆ ಮುಖಾಮುಖಿಯಾಗುತ್ತಿರುವ ಸಾಂಪ್ರದಾಯಿಕ ಎದುರಾಳಿಗಳ ಹೈ ವೋಲ್ಟೇಜ್‌ ಪಂದ್ಯದ ಮಜಾ ಸವಿಯಲು ಜನರು ಭಾನುವಾರ ಟಿ.ವಿ ಬಿಟ್ಟು ಕದಲಿಲ್ಲ. 

ಸದಾ ಜನರಿಂದ ಗಿಜಿಗುಡುತ್ತಿದ್ದ ರಸ್ತೆ, ಬಸ್‌, ಮಾಲ್‌ಗಳು ಬಿಕೊ ಎನ್ನುತ್ತಿದ್ದವು. ಯುವ ಜನರ ವೀಕೆಂಡ್‌ ಮೋಜು, ಮಸ್ತಿಗೆ ಭಾರತ–ಪಾಕ್‌ ಕ್ರಿಕೆಟ್‌ ಪಂದ್ಯ ಮತ್ತಷ್ಟು ರಂಗು ತಂದಿತ್ತು. ನಗರ ಮತ್ತು ಹೊರವಲಯದಲ್ಲಿರುವ ಪಬ್‌, ಜಾಯಿಂಟ್ ಮತ್ತು ರೆಸಾರ್ಟ್‌ಗಳು ದೊಡ್ಡ ಪರದೆಯಲ್ಲಿ ಕ್ರಿಕೆಟ್‌ ವೀಕ್ಷಣೆಗೆ ಅವಕಾಶ ನೀಡಿದ್ದವು. ಯುವ ಸಮೂಹ ಅತ್ತ ಮುಖ ಮಾಡಿತ್ತು.

 

ಎಂ.ಜಿ. ರಸ್ತೆಯ ದ ಬಾರ್‌ ಸ್ಟಾಕ್‌ ಎಕ್ಸೇಂಜ್‌, ಸೋಷಿಯಲ್‌,  ಮ್ಯಾನ್‌ಗ್ರೋವ್, ಕೋಕೋನಟ್‌ನಂತಹ ಪಬ್, ಬಾರ್‌ ರೆಸ್ಟೋರೆಂಟ್‌ಗಳಲ್ಲಿ ದೊಡ್ಡ ಪರದೆಯಲ್ಲಿ ಕ್ರಿಕೆಟ್‌ ಮಜಾ ಸವಿಯಲು ಯುವ ಜನರ ದಂಡೇ ನೆರೆದಿತ್ತು. ಭಾರತದ ಬ್ಯಾಟ್ಸ್‌ಮನ್‌ಗಳು ಪ್ರತಿ ಬಾರಿ ಬೌಂಡರಿ, ಸಿಕ್ಸರ್‌ ಹೊಡೆದಾಗ ಚಾವಣಿ ಕಿತ್ತು ಹೋಗುವಂತೆ ಕೇಕೆ, ಚಪ್ಪಾಳೆ, ಹರ್ಷೋದ್ಗಾರ, ಸೀಟಿಗಳ ಸದ್ದು ಸಾಮಾನ್ಯವಾಗಿತ್ತು. ಅದರ ಜತೆಗೆ ಕಿವಿ ತಮಟೆ ಹರಿಯುವಂತಹ ಸಂಗೀತ ಬೇರೆ. ತ್ರಿವರ್ಣ ಧ್ವಜ ಹಿಡಿದು ಕುಣಿದು, ಕುಪ್ಪಳಿಸುತ್ತಿದ್ದ ಚೀಯರ್‌ ಕ್ಲಬ್‌ ಸದಸ್ಯರ ಉತ್ಸಾಹಕ್ಕೆ ಮೇರೆಯೇ ಇರಲಿಲ್ಲ. 

ನೀಲಿ ಜರ್ಸಿ ತೊಟ್ಟು, ತ್ರಿವರ್ಣ ಧ್ವಜದ ಬಣ್ಣ ಮೆತ್ತಿಕೊಂಡಿದ್ದ ಪಬ್‌, ಬಾರ್‌ ಮತ್ತು ಜಾಯಿಂಟ್‌ಗಳ ಸಿಬ್ಬಂದಿ ಕೂಡ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಎಲ್ಲರಿಗೂ ತ್ರಿವರ್ಣ ಧ್ವಜದ ಚಿತ್ತಾರ ಬಿಡಿಸಲು ಪಬ್‌ ಮತ್ತು ರೆಸ್ಟೋರೆಂಟ್‌ಗಳು ಕಲಾವಿದರನ್ನು ವ್ಯವಸ್ಥೆ ಮಾಡಿದ್ದವು. ಅವರು ಬಾಗಿಲು ಬಳಿಯೇ ಬಣ್ಣ ಮತ್ತು ಕುಂಚಗಳೊಂದಿಗೆ ಸಜ್ಜಾಗಿ ನಿಂತಿದ್ದರು. 

‘ಕ್ರಿಕೆಟ್‌ ಬಗ್ಗೆ ಅಷ್ಟು ಆಸಕ್ತಿ ಇಲ್ಲ. ಭಾರತ–ಪಾಕ್‌ ಕ್ರಿಕೆಟ್‌ ಮಾತೇ ಬೇರೆ. ಮನೆಯ ಟಿ.ವಿಯಲ್ಲಿ ಇಂತಹ ಹೈವೋಲ್ಟೇಜ್‌ ಪಂದ್ಯ ನೋಡುವುದಕ್ಕಿಂತ ಸ್ನೇಹಿತರೊಂದಿಗೆ ಸೇರಿ ನೋಡುವ ಮಜಾನೇ ಬೇರೆ’ ಎಂದವರು ದ ಬಾರ್‌ ಸ್ಟಾಕ್‌ ಎಕ್ಸೇಂಜ್‌ ದೊಡ್ಡ ಪರದೆಯಲ್ಲಿ ಆಟದ ಮಜಾ ಸವಿಯುತ್ತಿದ್ದ ಯುವತಿ.

ಪ್ರತಿ ವೀಕೆಂಡ್‌ಗಳಿಗಿಂತ ಹೆಚ್ಚಿನ ಜನರು ಬಂದಿದ್ದಾರೆ. ಕೆಲವರು ಮೊದಲೇ ಸೀಟು ಬುಕ್ಕಿಂಗ್‌ ಮಾಡಿದ್ದಾರೆ. ಒಳ್ಳೆಯ ವಹಿವಾಟು ನಡೆಯುತ್ತಿದೆ. ಭಾರತ ಗೆದ್ದರೆ ಸಂಭ್ರಮಾಚರಣೆ ನೆಪದಲ್ಲಿ ರಾತ್ರಿ ಇನ್ನೂ ಒಳ್ಳೆಯ ವ್ಯಾಪಾರ ನಡೆಯುವ ನಿರೀಕ್ಷೆ ಎನ್ನುತ್ತಾರೆ ದ ಬಾರ್‌ ಸ್ಟಾಕ್‌ ಎಕ್ಸೇಂಜ್‌ ಮ್ಯಾನೇಜರ್‌ ರಘು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !