ಪ್ರಜ್ವಲ್‌ ರೇವಣ್ಣ: ದಾಖಲೆ ಒದಗಿಸಲು ಆದೇಶ

ಬುಧವಾರ, ಜೂಲೈ 17, 2019
27 °C

ಪ್ರಜ್ವಲ್‌ ರೇವಣ್ಣ: ದಾಖಲೆ ಒದಗಿಸಲು ಆದೇಶ

Published:
Updated:

ಬೆಂಗಳೂರು: ‘ಸಂಸದ ಪ್ರಜ್ವಲ್ ರೇವಣ್ಣ ಅವರು 2019ರ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್‌ ಅಭ್ಯರ್ಥಿಯಾಗಿ ಸಲ್ಲಿಸಿದ ನಾಮಪತ್ರ ವಿವರ ಹಾಗೂ ಚುನಾವಣಾ ವೆಚ್ಚದ ದೃಢೀಕರಣ ಪ್ರತಿಗಳನ್ನು ಇದೇ 3ರೊಳಗೆ ಅರ್ಜಿದಾರ ಜಿ. ದೇವರಾಜೇಗೌಡ ಅವರಿಗೆ ಒದಗಿಸಬೇಕು’ ಎಂದು ಹೈಕೋರ್ಟ್, ಹಾಸನ ಜಿಲ್ಲಾಧಿಕಾರಿಗೆ ಆದೇಶಿಸಿದೆ.

ಈ ಕುರಿತಂತೆ ಹಾಸನದ ವಕೀಲರೂ ಆದ ದೇವರಾಜೇಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ವಿಲೇವಾರಿ ಮಾಡಿದೆ.

‘ಚುನಾವಣಾ ತಕರಾರು ಅರ್ಜಿ ಸಲ್ಲಿಸಲು 45 ದಿನಗಳ ಕಾಲಾವಕಾಶ ಇರುತ್ತದೆ. ಈ ಅವಧಿ ಇದೇ 6ಕ್ಕೆ ಮುಕ್ತಾಯವಾಗಲಿದೆ. ಆದ್ದರಿಂದ ಇದೇ 3ರೊಳಗೆ ಅರ್ಜಿದಾರರಿಗೆ ವಿವರ ನೀಡಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಅರ್ಜಿದಾರರು ದಾಖಲೆ ಕೋರಿ ಏಪ್ರಿಲ್‌ 29ರಂದು ಸಲ್ಲಿಸಿದ್ದ ಮನವಿಗೆ ಜಿಲ್ಲಾಧಿಕಾರಿ, ‘ದಾಖಲೆಗೆಳಲ್ಲಾ ಖಜಾನೆಯ ಸುರಕ್ಷಿತ ವಶದಲ್ಲಿವೆ. ಹಾಗಾಗಿ ನೀಡಲಾಗದು‘ ಎಂದು ಉತ್ತರಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !