ರಾಜ್ಯಸಭೆಗೆ ಸಚಿವ ಜೈ ಶಂಕರ್ ಆಯ್ಕೆ

ಶನಿವಾರ, ಜೂಲೈ 20, 2019
22 °C
ನೂರಕ್ಕೂ ಹೆಚ್ಚು ಮತ ಪಡೆದ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು

ರಾಜ್ಯಸಭೆಗೆ ಸಚಿವ ಜೈ ಶಂಕರ್ ಆಯ್ಕೆ

Published:
Updated:
Prajavani

ಗಾಂಧಿನಗರ (ಪಿಟಿಐ): ಗುಜರಾತ್‌ನಿಂದ ರಾಜ್ಯಸಭೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ಮತ್ತೊಬ್ಬರು ಬಿಜೆಪಿ ಅಭ್ಯರ್ಥಿ ಹಾಗೂ ಒಬಿಸಿ ಮುಖಂಡ ಜಗ್‌ಲಾಜಿ ಠಾಕೂರ್‌ ಆಯ್ಕೆಯಾದರು. 

ಚುನಾವಣಾ ಅಧಿಕಾರಿಗಳು ಅಧಿಕೃತ ಘೋಷಣೆ ಮಾಡುವುದು ಬಾಕಿ ಇದ್ದರೂ, ಮುಖ್ಯಮಂತ್ರಿ ವಿಜಯ್‌ ರೂಪಾಣಿ ಅವರು ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿರುವ ಕುರಿತು ಮಾಧ್ಯಮಗಳಿಗೆ ತಿಳಿಸಿದರು. ಕಾಂಗ್ರೆಸ್‌, ಚಂದ್ರಿಕಾ ಚೂಡಾಸಮ  ಮತ್ತು ಗೌರವ್‌ ಪಾಂಡ್ಯ ಅವರನ್ನು ಕಣಕ್ಕಿಳಿಸಿತ್ತು. ಅಮಿತ್‌ ಶಾ ಮತ್ತು ಸ್ಮೃತಿಇರಾನಿ ಅವರು ಲೋಕಸಭೆಗೆ ಆಯ್ಕೆಯಾಗಿದ್ದರಿಂದ 2 ಸ್ಥಾನ ಖಾಲಿಯಾಗಿದ್ದವು. 

 ಜೈಶಂಕರ್ ಮತ್ತು ಠಾಕೂರ್ ಅವರು100ಕ್ಕೂ ಹೆಚ್ಚು ಮತಗಳನ್ನು ಪಡೆದರು. ‘ಚುನಾವಣೆಗೆ ಕಾಂಗ್ರೆಸ್‌ ಅಡ್ಡಿಪಡಿಸಿತ್ತು ಅಲ್ಲದೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಆದರೆ ಅವರ  ಪ್ರಯತ್ನ ವಿಫಲವಾಗಿದೆ’ ಎಂದು ರೂಪಾಣಿ ಹೇಳಿದರು. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !