ಶುಕ್ರವಾರ, ನವೆಂಬರ್ 15, 2019
21 °C

ಶಾಸಕರಿಗಾಗಿ ಹೋಟೆಲ್‌ವೊಂದರಲ್ಲಿ 30 ಕೊಠಡಿ ಕಾದಿರಿಸಿದ ಬಿಜೆಪಿ

Published:
Updated:

ಬೆಂಗಳೂರು: ರಾಜ್ಯ ಬಿಜೆಪಿ ಘಟಕವು ತನ್ನ ಶಾಸಕರಿಗಾಗಿ ದೊಡ್ಡಬಳ್ಳಾಪುರ ರಸ್ತೆಯ ಹೋಟೆಲ್‌ವೊಂದರಲ್ಲಿ 30 ಕೊಠಡಿಗಳನ್ನು ಕಾದಿರಿಸಿದೆ ಎಂದು ವರದಿಯಾಗಿದೆ.

ಈ ಕುರಿತು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‌ಐ ಭಾನುವಾರ ರಾತ್ರಿ ವರದಿ ಪ್ರಕಟಿಸಿದೆ. ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ‘ರಮಾಡ’ ಹೋಟೆಲ್‌ನಲ್ಲಿ ರಾಜ್ಯ ಬಿಜೆಪಿಯು ಎರಡು ದಿನಗಳ ಮಟ್ಟಿಗೆ 30 ಕೊಠಡಿಗಳನ್ನು ಕಾದಿರಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.  

ಆದರೆ, ಬಿಜೆಪಿ ಕೊಠಡಿಗಳನ್ನು ಯಾವ ದಿನದಿಂದ ಯಾವ ದಿನಕ್ಕೆ ಕಾದಿರಿಸಿದೆ ಎಂಬುದರ ಬಗ್ಗೆ ಎಎನ್‌ಐ ಬರೆದಿಲ್ಲ. ಈ ಕುರಿತ ಮಾಹಿತಿ ಸ್ಪಷ್ಟವಾಗಿದೆ.

ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಕ್ರಾಂತಿಯ ಹಿಂದೆ ಬಿಜೆಪಿ ಇದೆ ಎಂಬ ಮಾತುಗಳು ಕೇಳಿ ಬಂದಿವೆ. ಹೀಗಿರುವಾಗಲೇ ಬಿಜೆಪಿಯು ಕೊಠಡಿ ಕಾದಿರಿಸುವುದು ಭಾರಿ ಅನುಮಾನಗಳಿಗೆ ಕಾರಣವಾಗಿದೆ.

ಪ್ರತಿಕ್ರಿಯಿಸಿ (+)