ಗಾಂಧಿ ನೆನಪಲ್ಲಿ ಸೈಕಲ್ ರ್ಯಾಲಿ

ಜೋಹಾನ್ಸ್ಬರ್ಗ್: ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಅವರ ತತ್ವಗಳ ಕುರಿತು ಅರಿವು ಮೂಡಿಸುವ ಸಲುವಾಗಿ ಸೈಕಲ್ ರ್ಯಾಲಿ ಆಯೋಜಿಸಲಾಗಿತ್ತು.
ಗಾಂಧಿ ನಡಿಗೆ ಸಮಿತಿ ಸಹಯೋಗದಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಗಳು ಈ ಕಾರ್ಯಕ್ರಮ ಆಯೋಜಿಸಿದ್ದರು.
ಭಾರತೀಯರು ಅಧಿಕ ಸಂಖ್ಯೆಯಲ್ಲಿರುವ ಲೆನಾಶಿಯಾದಿಂದ ಸೈಕಲ್ ರ್ಯಾಲಿಗೆ ಚಾಲನೆ ನೀಡಲಾಯಿತು.
‘ಗಾಂಧೀಜಿ ಅವರ ತತ್ವಗಳಾದ ಸತ್ಯ, ಅಹಿಂಸೆ ಕುರಿತು ಅರಿವು ಮೂಡಿಸುವ ಸಲುವಾಗಿ ರ್ಯಾಲಿ ಆಯೋಜಿಸಲಾಗಿದೆ. ದಕ್ಷಿಣ ಆಫ್ರಿಕಾಕ್ಕೆ ಭಾರತ ವಕೀಲರನ್ನು ಕಳುಹಿಸಿತು. ಆದರೆ ನಾವು ಮಹಾತ್ಮನನ್ನು ವಾಪಸ್ ಕಳುಹಿಸಿದೆವು. ಹಾಗಾಗಿ ಇದು ಕರ್ಮಭೂಮಿ’ ಎಂದು ಕಾನ್ಸುಲ್– ಜನರಲ್ ಕೆ.ಜಿ. ಶ್ರೀನಿವಾಸ್ ಅವರು ತಿಳಿಸಿದರು.
‘ಗಾಂಧೀಜಿ ಸಮುದಾಯ ಅಭಿವೃದ್ಧಿಗೆ ಒತ್ತು ನೀಡಿದ್ದರು. ಅದೇ ಉದ್ದೇಶದಿಂದ ಸೈಕಲ್ ರ್ಯಾಲಿ ಆಯೋಜಿಸಲಾಗಿದೆ. ವೈಯಕ್ತಿಕ ಆರೋಗ್ಯದ ಜೊತೆಗೆ ಪರಿಸರ ಸಂರಕ್ಷಣೆಗೆ ಮಹತ್ವ ನೀಡುವುದು ಇದರ ಉದ್ದೇಶ’ ಎಂದು ಭಾರತೀಯ ಹೈಕಮಿಷನರ್ ಜಯದೀಪ್ ಸರ್ಕಾರ್ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.