ಮಂಗಳವಾರ, ಏಪ್ರಿಲ್ 13, 2021
32 °C

ಜನವಸತಿ ಪ್ರದೇಶದಲ್ಲಿ ರಾಶಿರಾಶಿ ಕಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೀಣ್ಯದಾಸರಹಳ್ಳಿ: ಹೆಗ್ಗನಹಳ್ಳಿ ವಾರ್ಡ್‌ನ ಸಂಜೀವಿನಿ ನಗರದ ಜನವಸತಿ ಪ್ರದೇಶದಲ್ಲಿ ಸುಮಾರು ತಿಂಗಳಿಂದ ಕಸ ಸುರಿಯಲಾಗುತ್ತಿದ್ದು, ಸಮಸ್ಯೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. 

‘ಸಾರ್ವಜನಿಕರು ರಾತ್ರೋರಾತ್ರಿ ಕಸ ತಂದು ಹಾಕುತ್ತಿದ್ದಾರೆ. ಬಿಡಾಡಿ ಹಸುಗಳು ಹಾಗೂ ಬೀದಿನಾಯಿಗಳು ಕಸವನ್ನು ಚೆಲ್ಲಾಡುತ್ತವೆ. ಮಳೆಗಾಲ ಇರುವುದರಿಂದ ಕಸ ನೀರಿನಲ್ಲಿ ಕೊಳೆತು ಗಬ್ಬು ವಾಸನೆ ಬರುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡುತ್ತಿವೆ’ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ. 

'ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ, ಜನಪ್ರತಿನಿಧಿಗಳನ್ನು ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದ್ದು ಜನರ ಸಮಸ್ಯೆ ಆಲಿಸುವವರು ಯಾರು'? ಎಂದು ಸ್ಥಳೀಯ ನಿವಾಸಿ ವಿಕಾಸ್ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.