ಭಾನುವಾರ, ಆಗಸ್ಟ್ 18, 2019
23 °C

ರುಮೇಶ್‌ ರತ್ನಾಯಕೆ ಲಂಕಾ ಕೋಚ್‌

Published:
Updated:

ಕೊಲಂಬೊ (ಪಿಟಿಐ): ಸ್ವದೇಶದಲ್ಲಿ ನ್ಯೂಜಿಲೆಂಡ್‌ ಎದುರು ನಡೆಯಲಿರುವ ಟೆಸ್ಟ್‌ ಸರಣಿಯಲ್ಲಿ ಆಡುವ ಶ್ರೀಲಂಕಾ ಕ್ರಿಕೆಟ್‌ ತಂಡಕ್ಕೆ ಹಂಗಾಮಿ ಕೋಚ್‌ ಆಗಿ ಮಾಜಿ ಟೆಸ್ಟ್‌ ವೇಗದ ಬೌಲರ್‌ ರುಮೇಶ್‌ ರತ್ನಾಯಕೆ ಅವರನ್ನು ನೇಮಕ ಮಾಡಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್‌ ಬುಧವಾರ ತಿಳಿಸಿದೆ.

ಮುಖ್ಯಕೋಚ್‌ ಆಗಿರುವ ಚಂಡಿಕ ಹತುರಸಿಂಘೆ ಅವರನ್ನು ಪದಚ್ಯುತಿ ಮಾಡಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟಪಡಿಸಲು ಅದು ನಿರಾಕರಿಸಿದೆ. ಶ್ರೀಲಂಕಾ ವಿಶ್ವಕಪ್‌ನಲ್ಲಿ ನೀರಸ ಪ್ರದರ್ಶನ ನೀಡಿದ ನಂತರ ಅವರ ತಲೆದಂಡವಾಗಬಹುದೆಂಬ ನಿರೀಕ್ಷೆ ಹಬ್ಬಿದೆ.

ಶ್ರೀಲಂಕಾ ಪರ 23 ಟೆಸ್ಟ್‌ ಪಂದ್ಯಗಳನ್ನು ಆಡಿರುವ ರುಮೇಶ್‌ ಅವರು 35.10ರ ಸರಾಸರಿಯಲ್ಲಿ 73 ವಿಕೆಟ್‌ ಉರುಳಿಸಿದ್ದಾರೆ. 125ರನ್‌ ನೀಡಿ 9 ವಿಕೆಟ್‌ ಪಡೆದಿರುವುದು ಅವರ ಶ್ರೇಷ್ಠ ಸಾಧನೆಯಾಗಿದೆ. 70 ಏಕದಿನ ಪಂದ್ಯಗಳನ್ನು ಆಡಿರುವ ಅವರು 76 ವಿಕೆಟ್‌ ಕಬಳಿಸಿದ್ದಾರೆ. 32 ರನ್‌ ನೀಡಿ 5 ವಿಕೆಟ್‌ ಪಡೆದಿರುವುದು ಅವರ ಉತ್ತಮ ಸಾಧನೆಯಾಗಿದೆ.

Post Comments (+)