ಭಾನುವಾರ, ಆಗಸ್ಟ್ 25, 2019
28 °C

ಮರಾಠಿ ಭಾಷೆ ಕಲಿಯುತ್ತಿದ್ದಾರೆ ಅರ್ಜುನ್‌

Published:
Updated:
Prajavani

ನಟ ಅರ್ಜುನ್ ಕಪೂರ್ ಬಹುನಿರೀಕ್ಷಿತ ಸಿನಿಮಾ ‘ಪಾಣಿಪತ್‌’ನಲ್ಲಿ ಬ್ಯುಸಿಯಾಗಿದ್ದಾರೆ.

ಆಶುತೋಷ್‌ ಗೊವಾರಿಕರ್‌ ನಿರ್ದೇಶನದ ಬಹುತಾರಾಗಣದ ಈ ಚಿತ್ರವು ಐತಿಹಾಸಿಕ ಕತೆ ಆಧರಿಸಿದ್ದು, ಇದರಲ್ಲಿ ಅರ್ಜುನ್‌  ಮರಾಠ ನಾಯಕ ಸದಾಶಿವರಾವ್‌ ಭಾವು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾಕ್ಕಾಗಿ ಅವರು ಸಾಕಷ್ಟು ತಯಾರಿ ನಡೆಸುತ್ತಿದ್ದು, ವರ್ಕೌಟ್‌ ಕೂಡ ಮಾಡುತ್ತಿದ್ದಾರೆ. ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು.

ಈಗ ಈ ಸಿನಿಮಾಕ್ಕಾಗಿ ಅರ್ಜುನ್‌, ಮರಾಠಿ ಕಲಿಯುತ್ತಿದ್ದಾರಂತೆ. ಅವರಿಗೆ ನಿರ್ದೇಶಕ ಆಶುತೋಷ್‌ ಅವರೇ ಮರಾಠಿ ಮಾತನಾಡಲು ಕಲಿಸುತ್ತಿದ್ದಾರೆ.

ಈ ಸಿನಿಮಾದಲ್ಲಿ ಸಂಜಯ್‌ ದತ್‌ ಖಳನಟನಾಗಿ ಅಭಿನಯಿಸಿದ್ದು, ಅವರು ಅಹ್ಮದ್‌ ಷಾ ಅಬ್ದಾಲಿಯಾಗಿ ನಟಿಸಿದ್ದಾರೆ. ಈ ಸಿನಿಮಾವು ಮೂರನೇ ಪಾಣಿಪತ್‌ ಯುದ್ಧದ ಕತೆಯನ್ನೊಳಗೊಂಡಿದೆ.

Post Comments (+)