ಗುರುವಾರ , ಆಗಸ್ಟ್ 22, 2019
27 °C

ವರುಣ್‌ ಸಂಭಾವನೆ ₹33 ಕೋಟಿ

Published:
Updated:

‘ಸ್ಟ್ರೀಟ್‌ ಡಾನ್ಸರ್‌ 3ಡಿ’ ಚಿತ್ರಕ್ಕೆ ವರುಣ್‌ ಧವನ್‌ ಪಡೆಯುತ್ತಿರುವ ಸಂಭಾವನೆ ₹33 ಕೋಟಿ.

ಇದು ನೃತ್ಯ ಪ್ರಧಾನ ಚಿತ್ರವಾಗಿದ್ದು, ನಾಯಕ ನಟ ವರುಣ್‌ ಸಂಭಾವನೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ. 

ಈಗಿನ ಯುವನಟರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟರ ಸಾಲಿಗೆ ವರುಣ್‌ ಧವನ್‌ ಸೇರಿದ್ದಾರೆ. ಸಿನಿಮಾದ ಸ್ಯಾಟಲೈಟ್‌ ಹಕ್ಕು ಮತ್ತು ಕಿರುತೆರೆಯಲ್ಲಿ ಅವರ ಸಿನಿಮಾಕ್ಕೆ ಹೆಚ್ಚು ಬೇಡಿಕೆ ಇರುವುದು ಇನ್ನೊಂದು ಕಾರಣ.

ಈಚೆಗೆ ವರುಣ್‌ ಅಭಿನಯದ ‘ಕಲಂಕ್‌’ ಸಿನಿಮಾ ಬಾಕ್ಸಾಫೀಸಿನಲ್ಲಿ ಸೋತಿತ್ತು. ಆದರೆ ಆ  ಸೋಲು ಅವರ ವೃತ್ತಿಜೀವನಕ್ಕೆ ಹೆಚ್ಚು ಪರಿಣಾಮ ಬೀರಿಲ್ಲ ಎನ್ನುವುದಕ್ಕೆ ಸಂಭಾವನೆ ಭಾರಿ ಹೆಚ್ಚಳ ಆಗಿರುವುದೇ ಸಾಕ್ಷಿ ಎಂದು ಬಾಲಿವುಡ್‌ನಲ್ಲಿ ಮಾತು ಕೇಳಿಬರುತ್ತಿದೆ. 

ಈ ಸಿನಿಮಾಕ್ಕೆ ಸಹಿ ಮಾಡುವಾಗಲೇ 11 ಕೋಟಿ ಸಂಭಾವನೆಯನ್ನು ಅವರು ಪಡೆದುಕೊಂಡಿದ್ದಾರೆ. ಈ ಸಿನಿಮಾವನ್ನು ರೆಮೊ ಡಿಸೋಜಾ ನಿರ್ದೇಶಿಸುತ್ತಿದ್ದಾರೆ. 

ಈ ಚಿತ್ರದಲ್ಲಿ ನಾಯಕಿಯಾಗಿ ಶ್ರದ್ಧಾ ಕಪೂರ್‌ ನಟಿಸುತ್ತಿದ್ದಾರೆ. ನಟ ಪ್ರಭುದೇವ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಜನವರಿ 24ರಂದು ಬಿಡುಗಡೆಯಾಗುತ್ತಿದೆ. 

Post Comments (+)