ಭಾನುವಾರ, ನವೆಂಬರ್ 17, 2019
28 °C

ಅಂಗನವಾಡಿ ಊಟದಲ್ಲಿ ಹಲ್ಲಿ: ಆಸ್ಪತ್ರೆಗೆ ಮಕ್ಕಳು

Published:
Updated:
Prajavani

ಮಂಡ್ಯ: ಅಂಗನವಾಡಿಯಲ್ಲಿ ವಿತರಿಸಿದ ಊಟದಲ್ಲಿ ಹಲ್ಲಿ ಬಿದ್ದಿರುವುದು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ 10 ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು.

ಇಲ್ಲಿನ ಗಾಂಧಿನಗರದ 11ನೇ ಕ್ರಾಸ್‌ನಲ್ಲಿರುವ ಅಂಗನವಾಡಿಯಲ್ಲಿ ಮಧ್ಯಾಹ್ನ ಮಕ್ಕಳಿಗೆ ಊಟ ಮಾಡಿಸಿ ಮಲಗಿಸಲಾಗಿತ್ತು. ಮಾತೃಪೂರ್ಣ ಯೋಜನೆಯಡಿ ನೀಡುವ ಊಟವನ್ನು ಅಮೂಲ್ಯಾ ಎಂಬ ಮಗು ಕೈಗೆ ಕೊಟ್ಟು ಕಳುಹಿಸಲಾಗಿತ್ತು. ಅಮೂಲ್ಯಾ ಮನೆಗೆ ತೆರಳಿ ಊಟ ಮಾಡುವಾಗ ಸಾರಿನಲ್ಲಿ ಸತ್ತಿದ್ದ ಹಲ್ಲಿ ಪತ್ತೆಯಾಗಿದೆ.

ಇದನ್ನು ನೋಡಿ ಗಾಬರಿಯಾದ ಅಮೂಲ್ಯಾ ತಾಯಿ ಅಂಗನವಾಡಿಗೆ ತಿಳಿಸಿದ್ದಾರೆ. ತಕ್ಷಣ ಎಲ್ಲಾ 10 ಮಕ್ಕಳನ್ನು ಸ್ಥಳೀಯ ಕ್ಯಾತುಂಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು. ಅಮೂಲ್ಯಾಗೆ ಮಾತ್ರ ವಾಂತಿ ಕಾಣಿಸಿಕೊಂಡಿದ್ದು, ಉಳಿದ ಮಕ್ಕಳು ಆರೋಗ್ಯವಾಗಿದ್ದಾರೆ. ಅಮೂಲ್ಯಾಳ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮಕ್ಕಳು ಸೇವಿಸಿದ ಆಹಾರ ಕಲುಷಿತವಾಗಿದೆಯೇ ಇಲ್ಲವೇ ಎಂಬುದು ತಿಳಿಯುತ್ತದೆ ಎಂದು ವೈದ್ಯರು ತಿಳಿಸಿದರು.

ಅಂಗನವಾಡಿಯಲ್ಲಿ ಹಲ್ಲಿ ಪತ್ತೆಯಾಗಿಲ್ಲ. ಮಗು ಊಟ ತೆಗೆದುಕೊಂಡು ಹೋಗುವಾಗ ಹಲ್ಲಿ ಬಿದ್ದಿರಬಹುದು ಎಂದು ಅಂಗನವಾಡಿ ಸಿಬ್ಬಂದಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)