ಶುಕ್ರವಾರ, ನವೆಂಬರ್ 15, 2019
23 °C

ಮಕ್ಕಳಲ್ಲಿ ಉತ್ತಮಮೌಲ್ಯ ಬೆಳೆಸಿ

Published:
Updated:
Prajavani

ಮುಳಬಾಗಿಲು: ಶಿಕ್ಷಕರು ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳಸುವುದು ಆದ್ಯಕರ್ತವ್ಯವಾಗಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.

ನಗರದ ಶ್ರೀನಿವಾಸ ಕಲ್ಯಾಣಮಂಟಪದಲ್ಲಿ ಗುರುವಾರ ತಾಲ್ಲೂಕು ಶಿಕ್ಷಕರ ದಿನ ಆಚರಣ ಸಮಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಭಾಷಣಕಾರ ತುಮಕೂರಿನ ಶಿಕ್ಷಣ ತಜ್ಞ ಎಂ.ನಿಕೇತ್‌ರಾಜ್ ಮಾತನಾಡಿ, ಈ ದೇಶದ ಭವಿಷ್ಯ ಮತ್ತು ನವ ಸಮಾಜದ ನಿರ್ಮಾಣ ಶಿಕ್ಷಕರ ಮೇಲೆ ನಿಂತಿದಿಯೇ ಹೊರೆತು ಯಾವುದೇ ರಾಜಕೀಯ ವ್ಯಕ್ತಿಗಳ ಮೇಲಲ್ಲ. ಶಿಕ್ಷಕ ಕಪ್ಪು ಹಲಗೆಯ ಮೇಲೆ ಬರೆದ ಅಕ್ಷರ ಮಗುವಿಗೆ ಜ್ಞಾನ ಕೊಡುವುದರ ಜತೆ ಈ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ರಾಧಕೃಷ್ಣನ್ ಹೇಳಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ವಿ.ಜಗನ್ನಾಥ್ ಪ್ರಸ್ತಾವಿಕವಾಗಿ ಮಾತನಾಡಿದರು.

ಪ್ರಾಥಮಿಕ, ಪ್ರೌಢಶಾಲಾ ನಿವೃತ್ತ ಶಿಕ್ಷಕರಿಗೆ, ಉತ್ತಮ ನಲಿಕಲಿ ಶಾಲೆಗಳ ಶಿಕ್ಷಕರಿಗೆ, ರಾಜ್ಯ ಮತ್ತು ಜಿಲ್ಲಾ ಉತ್ತಮ ಪ್ರಶಸ್ತಿ ಪಡೆದ ಶಿಕ್ಷಕರಿಗೆ, ಕ್ರೀಡೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಮಕ್ಕಳಿಗೆ, ಶಿಕ್ಷಕರನ್ನು ಸನ್ಮಾನಿಸಲಾಯಿತು.

ಜಿ.ಪಂ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ, ತಾ.ಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್, ಜಿ.ಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ, ಎಚ್.ಎನ್.ಪ್ರಕಾಶ್ ರಾಮಚಂದ್ರ, ಜಿ.ಪಂ ಸದಸ್ಯರಾದ ವಿ.ಎಸ್.ಅರವಿಂದ್ ಕುಮಾರ್, ನಾಗಮಣಿ ಸುಬ್ರಮಣಿರೆಡ್ಡಿ, ತಾ.ಪಂ ಸದಸ್ಯರಾದ ರವಿಕುಮಾರ್, ಗಂಗಿರೆಡ್ಡಿ, ಮಾಜಿ ಅಧ್ಯಕ್ಷ ಸಿ.ವಿ.ಗೋಪಾಲ್, ಸಿಪಿಎಂ ಎಂ.ಗೋಪಾಲ್, ಶ್ರೀನಾಥ್, ವಕೀಲರಾದ ಕವತನಹಳ್ಳಿ ವಿನೋದ್‌ಕುಮಾರ್, ಅಮರನಾಥ್, ಶ್ರೀನಿವಾಸ್, ನಗರಸಭೆ ಆಯುಕ್ತ ಶ್ರೀನಿವಾಸಮೂರ್ತಿ, ತಾ.ಪಂ ಇಒ ವಿ.ವೆಂಕಟಾಚಲಪತಿ, ಪ್ರಭಾರ ಬಿಇಒ ಸೋಮೇಶ್, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಅಶೋಕ್, ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಸೋಮಶೇಖರ್, ಆನಂದ್, ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘಧ ಅಧ್ಯಕ್ಷ ಎನ್.ರೆಡ್ಡಪ್ಪ, ಪ್ರಧಾನ ಕಾರ್ಯದರ್ಶಿ ತಾಯಲೂರಪ್ಪ, ಗೌರವಾಧ್ಯಕ್ಷ ವಾಲಿಬಾಲ್ ಶಿವಣ್ಣ, ಚಿಕ್ಕರೆಡ್ಡಪ್ಪ, ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಆವನಿ ಆನಂದ್, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಸುಬ್ರಮಣಿರೆಡ್ಡಿ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಇ.ಶ್ರೀನಿವಾಸ್, ತಾಲ್ಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ವಿ.ಜನಾರ್ದನ್, ಇಸಿಒಗಳಾದ ಅಂಜಿತ್ ಕುಮಾರ್, ಮುನಿಶಾಮಿ, ಖಾಸಗಿ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರ್, ಕಾರ್ಯದರ್ಶಿ ಆದಿಲ್ ಪಾಷಾ, ಜಿಲ್ಲಾ ಪಧಾದಿಕಾರಿಗಳಾದ ವೆಂಕಟಗಿರಿಯಪ್ಪ, ನಾಗರತ್ನಮ್ಮ, ಬೇಬಿ, ಕಲಾವತಿ, ನಾಗರಾಜ್, ಮುಖಂಡರಾದ ಪೈಜುಲ್ಲಾ, ರಾಜ್‌ಕುಮಾರ್, ನಟರಾಜ್ ಇದ್ದರು.

ಪ್ರತಿಕ್ರಿಯಿಸಿ (+)