ಶನಿವಾರ, ನವೆಂಬರ್ 23, 2019
18 °C

ಟಿಟಿ ಟೂರ್ನಿ: ರೋಹನ್‌ ಯಶಸ್ವಿನಿಗೆ ಸಿಂಗಲ್ಸ್ ಗರಿ

Published:
Updated:
Prajavani

ಮೈಸೂರು: ಸ್ಕ್ಕೈಸ್‌ ಅಕಾಡೆಮಿಯ ರೋಹನ್ ಎಸ್‌.ಜಮದಗ್ನಿ ಮತ್ತು ಯಶಸ್ವಿನಿ ಘೋರ್ಪಡೆ ಅವರು ಮೈಸೂರು ಜಿಲ್ಲಾ ಟೇಬಲ್ ಟೆನಿಸ್‌ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಯೂತ್‌ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.

ಮೈಸೂರು ವಿ.ವಿ ಜಿಮ್ಖಾನಾ ಹಾಲ್‌ನಲ್ಲಿ ಗುರುವಾರ ನಡೆದ ಯೂತ್‌ ಬಾಲಕರ ಫೈನಲ್‌ನಲ್ಲಿ ರೋಹನ್ 12–10, 11–6, 11–8, 7–11, 11–2 ರಲ್ಲಿ ಕೌಸ್ತುಭ್ ಮಿಲಿಂದ್‌ ಕುಲಕರ್ಣಿ ಅವರನ್ನು ಮಣಿಸಿದರು.

ಸೆಮಿಫೈನಲ್‌ ಪಂದ್ಯದಲ್ಲಿ ರೋಹನ್ 3–11, 11–7, 11–7, 11–5, 12–10 ರಲ್ಲಿ ಕೆ.ಜೆ.ಆಕಾಶ್ ವಿರುದ್ಧ; ಕೌಸ್ತುಭ್ 11–6, 11–7, 2–11, 11–6, 7–11, 11–9 ರಲ್ಲಿ ಸುಜನ್‌ ಆರ್‌.ಭಾರದ್ವಾಜ್‌ ವಿರುದ್ಧ ಗೆಲುವು ಪಡೆದಿದ್ದರು.

ಯೂತ್‌ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಯಶಸ್ವಿನಿ 6–11, 11–9, 6–11, 11–9, 11–8, 3–11, 11–6 ರಲ್ಲಿ ವಿ.ಖುಷಿ ಅವರನ್ನು ಸೋಲಿಸಿದರು.

ಸೆಮಿಫೈನಲ್‌ನಲ್ಲಿ ಯಶಸ್ವಿನಿ 15–13, 13–15, 11–2, 13–11, 11–9 ರಲ್ಲಿ ಕರುಣಾ ಗಜೇಂದ್ರನ್‌ ವಿರುದ್ಧ; ಖುಷಿ 11–3, 11–9, 11–8, 11–5 ರಲ್ಲಿ ಸುಷ್ಮಿತಾ ಆರ್‌.ಬಿದರಿ ವಿರುದ್ಧ ಜಯ ಸಾಧಿಸಿದ್ದರು.

ಪ್ರತಿಕ್ರಿಯಿಸಿ (+)