ಮಂಗಳವಾರ, ನವೆಂಬರ್ 12, 2019
28 °C

2020 ಬಾಲಿವುಡ್ ನಟ ಅಕ್ಷಯ್ ಕುಮಾರ್ ಅದೃಷ್ಟದ ವರ್ಷ

Published:
Updated:

ಬಾಲಿವುಡ್‌ ನಟ ಅಕ್ಷಯ್‌ಕುಮಾರ್‌ (ಅಕ್ಕಿ) ಈಗ 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಇತ್ತೀಚೆಗಷ್ಟೇ ‘ಕೇಸರಿ’, ‘ಮಿಷನ್ ಮಂಗಲ್‌’ ಮೂಲಕ ಸದ್ದು ಮಾಡಿದ ಅವರು, ಮತ್ತೊಂದು ಮೆಗಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಪೃಥ್ವಿರಾಜ್‌’ ಚಿತ್ರದ ಟೀಸರ್‌ ಅನ್ನು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

ಸಾಹಸ ಚಿತ್ರಗಳಲ್ಲೇ ಹೆಚ್ಚು ನಟಿಸುತ್ತಿದ್ದ ಅಕ್ಷಯ್, ಇದೇ ಮೊದಲ ಬಾರಿಗೆ ಐತಿಹಾಸಿಕ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ರಾಜ ಪೃಥ್ವಿರಾಜ್‌ ಚೌಹಾಣ್‌ ಶೌರ್ಯ, ಪರಾಕ್ರಮ ಹಾಗೂ ಅವರ ಮೌಲ್ಯಗಳನ್ನು ಸಾರುವ ಪಾತ್ರದಲ್ಲಿ ಮಿಂಚಲು ಅವರು ರೆಡಿಯಾಗಿದ್ದಾರೆ.

ಈ ಅದ್ದೂರಿ ಚಿತ್ರವನ್ನು ಯಶ್‌ರಾಜ್‌ ಫಿಲ್ಮ್ಸ್‌ ಬ್ಯಾನರ್‌ನಡಿ ನಿರ್ಮಿಸುತ್ತಿದ್ದು, ಡಾ.ಚಂದ್ರಪ್ರಕಾಶ್‌ ದ್ವಿವೇದಿ ನಿರ್ದೇಶಿಸಲಿದ್ದಾರೆ.

ಈ ಅದ್ದೂರಿ ಚಿತ್ರವು 2020ರ ದೀಪಾವಳಿಗೆ ತೆರೆಗೆ ಬರಲಿದೆ. ಟೀಸರ್‌ ಕೂಡ ಕುತೂಹಲ ಮೂಡಿಸುವಂತಿದ್ದು, ಅಕ್ಷಯ್‌ಕುಮಾರ್‌ ಈ ಟೀಸರ್‌ ಪೋಸ್ಟ್‌ ಮಾಡಿದ ಐದು ತಾಸುಗಳಲ್ಲಿ ಸುಮಾರು 3.23 ಲಕ್ಷ ಜನರು ಟ್ವಿಟರ್‌ನಲ್ಲಿ ವೀಕ್ಷಿಸಿದ್ದಾರೆ. 

‘ಜನ್ಮದಿನದಂದು ನನ್ನ ಮೊದಲ ಐತಿಹಾಸಿಕ ಚಿತ್ರದ ಸುದ್ದಿ ಹಂಚಿಕೊಳ್ಳಲು ನಿಜಕ್ಕೂ ಸಂತೋಷವಾಗಿದೆ. ಪೃಥ್ವಿರಾಜ್‌ ಶೌರ್ಯ ಮತ್ತು ಮೌಲ್ಯಗಳನ್ನು ತೆರೆಯ ಮೇಲೆ ತೋರಿಸುವ ಅವಕಾಶ ಸಿಕ್ಕಿರುವುದಕ್ಕೆ ವಿನಮ್ರನಾಗಿದ್ದೇನೆ’ ಎಂದು ಟ್ವಿಟರ್‌ನಲ್ಲಿ ಅಕ್ಷಯ್‌ ಬರೆದುಕೊಂಡಿದ್ದಾರೆ.

ನಟಿ ಕಿಯಾರಾ ಅಡ್ವಾಣಿ, ಅಕ್ಷಯ್‌ ಕುಮಾರ್‌ಗೆ ಹುಟ್ಟುಹಬ್ಬದ ಶುಭಾಶಯ ಹೇಳುವ ನೆಪದಲ್ಲಿ ಟ್ವಿಟರ್‌ನಲ್ಲಿ ‘ಲಕ್ಷ್ಮಿ ಬಾಂಬ್‌’ ಹೊಸ ಸಿನಿಮಾದ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಕಣ್ರೆಪ್ಪೆಗೆ ಕಾಡಿಗೆ ಹಚ್ಚಿಕೊಳ್ಳುತ್ತಿರುವ ಅಕ್ಷಯ್‌ ಇದರಲ್ಲಿ ಡಿಫರೆಂಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

ಪ್ರತಿಕ್ರಿಯಿಸಿ (+)