ಬುಧವಾರ, ನವೆಂಬರ್ 20, 2019
21 °C
ಬೆಂಗಳೂರು

ಭಾರತ–ದಕ್ಷಿಣ ಆಫ್ರಿಕಾ ಟ್ವೆಂಟಿ 20 ಪಂದ್ಯ: ಮೆಟ್ರೊ ಸಂಚಾರ ಅವಧಿ ವಿಸ್ತರಣೆ

Published:
Updated:

ಬೆಂಗಳೂರು: ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದ ನಿಮಿತ್ತ ಭಾನುವಾರ ಮೆಟ್ರೊ ರೈಲು ಸಂಚಾರದ ಅವಧಿಯನ್ನು ರಾತ್ರಿ 11.30ರವರೆಗೆ ವಿಸ್ತರಿಸಲಾಗಿದೆ. 

ಕೊನೆಯ ರೈಲು ಮೆಜೆಸ್ಟಿಕ್‌ ನಿಲ್ದಾಣದಿಂದ ಭಾನುವಾರ ರಾತ್ರಿ 11.45ರವರೆಗೆ ನಾಲ್ಕು ದಿಕ್ಕುಗಳಲ್ಲಿ ಲಭ್ಯವಿರುತ್ತದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಹೇಳಿದೆ. 

ಇದನ್ನೂ ಓದಿ: ಸರಣಿ ಜಯದ ಮೇಲೆ ವಿರಾಟ್ ಬಳಗದ ಕಣ್ಣು

ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಕಬ್ಬನ್‌ ಪಾರ್ಕ್‌ ಮೆಟ್ರೊ ನಿಲ್ದಾಣದಿಂದ ಇತರ ಮೆಟ್ರೊ ನಿಲ್ದಾಣಗಳಿಗೆ ರಾತ್ರಿ 10ರ ನಂತರ ಪ್ರಯಾಣಿಸಲು ₹50 ರಿಟರ್ನ್‌ ಜರ್ನಿ ಕಾಗದದ ಟಿಕೆಟ್‌ ಖರೀದಿಸಬಹುದು. ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ಎಲ್ಲ ನಿಲ್ದಾಣಗಳಲ್ಲಿ ಈ ಟಿಕೆಟ್‌ ಲಭ್ಯ. ಕಬ್ಬನ್‌ ‍ಪಾರ್ಕ್‌ ಮೆಟ್ರೊ ನಿಲ್ದಾಣದಲ್ಲಿ ಭಾನುವಾರ ರಾತ್ರಿ 10ರ ನಂತರ ಟೋಕನ್‌ ಮಾರಾಟ ಇರುವುದಿಲ್ಲ ಎಂದು ನಿಗಮ ಹೇಳಿದೆ. 

ಪ್ರತಿಕ್ರಿಯಿಸಿ (+)