ಶನಿವಾರ, ಅಕ್ಟೋಬರ್ 19, 2019
27 °C

ಕಾಣೆಯಾಗಿದ್ದಬೆಂಗಳೂರಿನ ಚಾರಣಿಗ ಪತ್ತೆ

Published:
Updated:

ಶಿಮ್ಲಾ: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಶನಿವಾರ ನಾಪತ್ತೆ ಯಾಗಿದ್ದ ಬೆಂಗಳೂರಿನ ಚಾರಣಿಗ ಕೌಶಿಕ್ ವೇಣುಗೋಪಾಲ್‌  ಪತ್ತೆಯಾಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

‘ಮಣಿಕರಣ್ ಪೊಲೀಸ್‌ ಠಾಣೆ ಸಿಬ್ಬಂದಿ ಹಾಗೂ ಸ್ಥಳೀಯರನ್ನು ಒಳಗೊಂಡ ತಂಡ ಸೋಮವಾರ ಕೌಶಿಕ್‌ ಅವರನ್ನು ಪತ್ತೆ ಮಾಡಿತು. ಕೌಶಿಕ್ ಮಂಗಳವಾರ ಸ್ನೇಹಿತರ ತಂಡವನ್ನು ಸೇರಿಕೊಂಡಿದ್ದಾರೆ’ ಎಂದು ಕುಲ್ಲು ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಸಿಂಗ್ ಹೇಳಿದ್ದಾರೆ.

‘ಪಾರ್ವತಿ ಕಣಿವೆಯ ಕೊನೆಯಲ್ಲಿ, ಸಮುದ್ರಮಟ್ಟದಿಂದ 3,050 ಮೀ. ಎತ್ತರದಲ್ಲಿರುವ ಖೀರ್‌ ಗಂಗಾ ಪರ್ವತ ಏರಲು ಕೌಶಿಕ್‌ ಹಾಗೂ ಇಬ್ಬರು ಸ್ನೇಹಿತರು ಚಾರಣ ಹೊರಟಿದ್ದರು. ಆದರೆ ದಾರಿ ಮಧ್ಯೆ ಕೌಶಿಕ್ ನಾಪತ್ತೆಯಾಗಿದ್ದರು’ ಎಂದು ಅವರು ಮಾಹಿತಿ ನೀಡಿದ್ದಾರೆ.

 

Post Comments (+)