ಶುಕ್ರವಾರ, ನವೆಂಬರ್ 22, 2019
26 °C
ಶುಕ್ರವಾರ

ಕೋಮು ಪಿಡುಗನ್ನು ಸದೆಬಡಿಯಲು ಎಲ್ಲ ಕ್ರಮಕ್ಕೆ ಇಂದಿರಾ ಕರೆ

Published:
Updated:

ಕೋಮು ಪಿಡುಗನ್ನು ಸದೆಬಡಿಯಲು ಎಲ್ಲ ಕ್ರಮಕ್ಕೆ ಇಂದಿರಾ ಕರೆ

ನವದೆಹಲಿ, ಅ. 16– ಕೋಮು ಪಿಡುಗನ್ನು ಎದುರಿಸಲು ಎಲ್ಲ ರಾಜಕೀಯ ಪಕ್ಷಗಳೂ ಒಟ್ಟುಗೂಡಿ ಹೇಗೆ ಕೆಲಸ ಮಾಡಬೇಕೆಂಬುದನ್ನು ಸಮಿತಿಯು ತೀವ್ರವಾಗಿ ಪರಿಶೀಲಿಸಬೇಕೆಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ರಾಷ್ಟ್ರೀಯ ಸಂಘಟನಾ ಮಂಡಲಿಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು.

ಬೆಸುಗೆ ಕಾರ್ಯದ ಬಳಿಕ ಸೋಯುಜ್‌–6 ಮರಳಿ ಧರೆಗೆ: ನಿಲ್ದಾಣ ರಚನೆ ಇಲ್ಲ

ಮಾಸ್ಕೊ, ಅ. 16– ಲೋಹಗಳ ಬೆಸುಗೆಯ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ ನಂತರ ಅಂತರಿಕ್ಷ ನೌಕೆ ಸೋಯುಜ್–6 ಸುರಕ್ಷಿತವಾಗಿ ಧರೆಗಿಳಿಯಿತೆಂದೂ ಇನ್ನೆರಡು ಅಂತರಿಕ್ಷ ನೌಕೆಗಳು ಇನ್ನೂ ಪಥದಲ್ಲಿ ಸುತ್ತುತ್ತಿವೆಯೆಂದೂ ಇಂದು ಇಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು.

ಗಗನಯಾತ್ರಿಕರಾದ ಕರ್ನಲ್ ಗಿಯೋರ್ಗಿ ಸೋನ್ನಿವ್ ಮತ್ತು ಫ್ಲೈಟ್‌ ಎಂಜಿನಿಯರ್‌ ವ್ಯಾಲೆರಿ ಕುಬಸೋವ್ ಅವರನ್ನು ಹೊತ್ತ ಅಂತರಿಕ್ಷ ನೌಕೆ ಸೋಯುಜ್–6 ರಷ್ಯದ ಮಧ್ಯ ಏಷ್ಯಾದ ಕರಗಂಡ ನಗರದ ನೈರುತ್ಯ ದಿಕ್ಕಿನ ಪ್ರದೇಶದಲ್ಲಿ ಬಂದಿಳಿಯಿತು.

ರಾಜ್ಯದಲ್ಲಿ ಶ್ರೇಷ್ಠ ಬಾಕ್ಸೈಟ್ ಅದುರು: ಅಲ್ಯೂಮಿನಿಯಂ ಕಾರ್ಖಾನೆಗೆ ಅವಕಾಶ

ಬೆಂಗಳೂರು, ಅ. 16– ಮೈಸೂರು ರಾಜ್ಯದ ಕರಾವಳಿಯುದ್ದಕ್ಕೂ ಕಂಡು ಬಂದಿರುವ ಶ್ರೇಷ್ಠ ದರ್ಜೆಯ ‘ಬಾಕ್ಸೈಟ್’ ಅದುರು ರಾಜ್ಯದಲ್ಲಿ ಅಲ್ಯೂಮಿನಿಯಂ ಕಾರ್ಖಾನೆ ಸ್ಥಾಪನೆಗೆ ಅವಕಾಶ ಕಲ್ಪಿಸಿಕೊಟ್ಟಿದೆ.

ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದ ರಾಜ್ಯದ ಗಣಿ ಹಾಗೂ ಭೂಗರ್ಭ ಇಲಾಖೆಯು, ಈ ಪ್ರದೇಶದಲ್ಲಿ ಅಲ್ಯೂಮಿನಿಯಂ ಕಾರ್ಖಾನೆ ಸ್ಥಾಪಿಸುವ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ.

ಪ್ರತಿಕ್ರಿಯಿಸಿ (+)