ಮಂಗಳವಾರ, ನವೆಂಬರ್ 12, 2019
20 °C

ಮನೋಜ್ ಪ್ರಭಾಕರ್ ವಿರುದ್ಧ ದೂರು

Published:
Updated:
Prajavani

ನವದೆಹಲಿ: ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್ ಮತ್ತು ಅವರ ಪತ್ನಿಯ ವಿರುದ್ಧ ವಂಚನೆ ಪ್ರಕರಣವನ್ನು ದೆಹಲಿ ಪೊಲೀಸರು ದಾಖಲಿಸಿಕೊಂಡಿದ್ಧಾರೆ.

ಮನೆ ಮಾರಾಟದ ವಿವಾದಕ್ಕೆ ಸಂಬಂಧಿಸಿದಂತೆ ಲಂಡನ್‌ನಲ್ಲಿರುವ ಸಂಧ್ಯಾ ಶರ್ಮಾ ಪಂಡಿತ್ ಎಂಬುವವರು ದೂರು ದಾಖಲಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

‘ದಕ್ಷಿಣ ದೆಹಲಿಯ ಸರ್ವಪ್ರಿಯಾ ವಿಹಾರ್‌ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಲ್ಲಿ ನಮ್ಮ ಮನೆಯಿದೆ. ಮೊದಲ ಮಹಡಿಯಲ್ಲಿ ಮನೋಜ್ ಮನೆಯಿದೆ. ನಾವು ಲಂಡನ್‌ನಲ್ಲಿರುವುದರಿಂದ ನಮ್ಮ ಮನೆಗೆ ಬೀಗ ಹಾಕಿದ್ದೆವು. ಆದರೆ ಅದನ್ನು ಒಡೆದು ಬೇರೊಬ್ಬರಿಗೆ ಮನೋಜ್ ಅವರು ಬಾಡಿಗೆ ಕೊಟ್ಟಿದ್ಧಾರೆ’ ಎಂದು ಸಂಧ್ಯಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈಚೆಗೆ ಅವರು ಲಂಡನ್‌ನಿಂದ ದೆಹಲಿಗೆ ಬಂದಾಗ ಈ ಮನೆಗೆ ತೆರಳಿದ್ದರು. ಆಗ ವಿಷಯ ಬಹಿರಂಗವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮನೋಜ್ ಪ್ರಭಾಕರ್, ಅವರ ಪತ್ನಿ ಮತ್ತು ಇಬ್ಬರು ಆಸ್ತಿ ಏಜೆಂಟರ್ ವಿರುದ್ಧ ವಂಚನೆ, ಅತಿಕ್ರಮಣ ಪ್ರಕರಣಗಳನ್ನು ದಾಖಲಿಸಲಾಗಿದೆ.

ಪ್ರತಿಕ್ರಿಯಿಸಿ (+)