ಸಿಎಂ ಭರವಸೆ: ಇಂದು ಮುಖಂಡರ ಸಭೆ

7

ಸಿಎಂ ಭರವಸೆ: ಇಂದು ಮುಖಂಡರ ಸಭೆ

Published:
Updated:

ಅಫಜಲಪುರ: ಗುಲ್ಬರ್ಗ ಹೊಸುರ ರಸ್ತೆ ಮತ್ತು ಘತ್ತರ್ಗಿ ಬಳೂರ್ಗಿ ರಸ್ತೆ ದುರಸ್ತಿ ಮಾಡುವ ಕುರಿತು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮುಖಂಡರ ನಿಯೋಗ ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿ ಮನವಿ ಪತ್ರ ನೀಡಿದ್ದು, ನಂತರ ಅವರು ನಿಯೋಗಕ್ಕೆ ನೀಡಿರುವ ಭರವಸೆ ಕುರಿತು ಚರ್ಚೆ ಮಾಡಲು ಶನಿವಾರ ಮುಖಂಡರ ಸಭೆ ಕರೆದಿದೆ. ಈ ಸಭೆಯಲ್ಲಿ ಉಪವಾಸ ಸತ್ಯಾಗ್ರಹ ಮುಂದುವರಿಸುವ ಬಗ್ಗೆ ಚರ್ಚೆ ಮಾಡಲಾಗುತ್ತದೆಂದು ತಿಳಿದು ಬಂದಿದೆ.ಗುಲ್ಬರ್ಗ ಚವಡಾಪೂರ ರಸ್ತೆಯನ್ನು ಒಂದು ವಾರದಲ್ಲಿ ಕಾಮಗಾರಿ ಆರಂಭ ಮಾಡುತ್ತೇವೆ. ಮತ್ತು ಚವಡಾಪೂರ ದಿಂದ ಹೊಸುರದ ವರೆಗೆ ಹೊಸ ರಸ್ತೆ ನಿರ್ಮಾಣವಾಗುವವರೆಗೆ ರಸ್ತೆ ದುರಸ್ತಿಗಾಗಿ 5 ಕೋಟಿ ರೂ. ಬಿಡುಗಡೆ ಮಾಡುವದಾಗಿ ಮುಖ್ಯಮಂತ್ರಿಗಳು ನಿಯೋಗಕ್ಕೆ ಭರವಸೆ ನೀಡಿದ್ದರಿಂದ, ಅದರ ಕುರಿತು ಉಪವಾಸ ನಿರತ ಮುಖಂಡರು ಶನಿವಾರ ಉಪವಾಸ ನಿರತ ಸ್ಥಳದಲ್ಲಿಯೆ ಸಭೆ ಕರೆದಿದ್ದಾರೆ. ಈ ಕುರಿತು ಮುಖಂಡರಾದ ಫಿರೋಜ ಜಾಹಗೀರದಾರ, ಚಂದು ಕರಜಗಿ, ಶರಣು ವಾಳಿ ವಿಷಯ ತಿಳಿಸಿದರು.ಮಾಜಿ ಶಾಸಕ ಎಂ.ವೈ.ಪಾಟೀಲ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿ ನಿಯೋಗ ಭೇಟಿ ಮಾಡಲಾಗಿತ್ತು, ನಿಯೋಗದಲ್ಲಿ ಚಂದ್ರಶೇಖರ ನಿಂಬಾಳ, ಮಹಾದೇವ ಕಲಕೇರಿ, ಮಲ್ಲಯ್ಯ ಹೊಸಮಠ, ಬಿಲ್ಲಮರಾಜ ಮ್ಯಾಳೇಶಿ, ಶಿವಪುತ್ರಪ್ಪ ಸಂಗೋಳಗಿ, ಚನ್ನಬಸಯ್ಯ ಹಿರೇಮಠ ಅವರುಗಳು ಸೇರಿದಂತೆ 30 ಜನ ಮುಖಂಡರು ನಿಯೋಗದಲ್ಲಿ ಭಾಗವಹಿಸಿದ್ದರು. ಶುಕ್ರವಾರ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಕರವೇ (ಪ್ರವೀಣ ಶೆಟ್ಟಿ ಬಣ) ಮುಖಂಡರಾದ ಧಾನು ಪತಾಟೆ, ಸುನೀಲ ಶೆಟ್ಟಿ, ಚಂದ್ರಕಾಂತ ಪ್ಯಾಟಿ, ಮಲ್ಲು ವಾಳಿ, ಸಂಗು ಮಣ್ಣೂರ, ಅನೀಲ ಕಾಚಾಪೂರೆ, ಚನ್ನಬಸು ನಾವಿ, ಶಿವಬಸು ಕೋರಿ, ಹಣಮಂತ ಬಗಲಿ, ಕಂಠೆಪ್ಪ ಹಳಮನಿ, ಸಿದ್ಧು ಕೋರಳ್ಳಿ ಭಾಗವಹಿಸದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry