ಸೋಮವಾರ, ಜನವರಿ 27, 2020
17 °C

ವಕ್ರಪಾದಕ್ಕೆ ಚಿಕಿತ್ಸೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಕ್ಕಳನ್ನು ಕಾಡುವ ವಕ್ರಪಾದ (ಕ್ಲಬ್‌ಫೂಟ್) ದೋಷವನ್ನು ಬಾಲ್ಯಾವಸ್ಥೆಯಲ್ಲಿಯೇ ಪರಿಹರಿಸಲು ಸಾಧ್ಯವಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಎಚ್‌ಕೆಇ ಸಂಸ್ಥೆ ಉಪಾಧ್ಯಕ್ಷ ಡಾ. ಸೂರ್ಯಕಾಂತ ಜಿ. ಪಾಟೀಲ ಅಭಿಪ್ರಾಯಪಟ್ಟರು.ಇಲ್ಲಿನ ಬಸವೇಶ್ವರ ಆಸ್ಪತ್ರೆಯಲ್ಲಿ ಮಂಗಳವಾರ `ವಕ್ರಪಾದ ಚಿಕಿತ್ಸಾ ಕ್ಲಿನಿಕ್~ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಜನಿಸಿದ ತಕ್ಷಣ ವಕ್ರಪಾದ ದೋಷ ಕಾಣಿಸುವುದರಿಂದ ಆಗಲೇ ಚಿಕಿತ್ಸೆ ಆರಂಭಿಸಬಹುದು ಎಂದು ನುಡಿದರು.“ಇದೊಂದು ಸರಳ ಹಾಗೂ ಸುಲಭ ವಿಧಾನವಾಗಿದ್ದು, ವಿಶ್ವದ ಎಲ್ಲೆಡೆ ಮಾನ್ಯತೆ ಸಿಕ್ಕಿದೆ. ಬಾಲ್ಯದಲ್ಲೇ ಮಗುವಿಗೆ ಈ ಚಿಕಿತ್ಸೆ ನೀಡಿ, ಸರಿಪಡಿಸಿದರೆ ಮುಂದಿನ ದಿನಗಳಲ್ಲಿ ಅಂಗವೈಕಲ್ಯದಿಂದ ಆ ಮಗು ನರಳುವುದನ್ನು ತಪ್ಪಿಸಬಹುದು. ಇಂಥ ಉಪಯುಕ್ತ ಉಪಚಾರಕ್ಕೆಂದೇ ವಕ್ರಪಾದ ಚಿಕಿತ್ಸಾ ಕ್ಲಿನಿಕ್ ಆರಂಭಿಸಲಾಗಿದೆ. ಪಾಲಕರು ಇದರ ಪ್ರಯೋಜನ ಪಡೆಯಬೇಕು” ಎಂದು ಅವರು ಸಲಹೆ ಮಾಡಿದರು.ಡಾ. ರುದ್ರಪ್ರಸಾದ ಮಾತನಾಡಿ, ವಕ್ರಪಾದ ಚಿಕಿತ್ಸೆಗೆ ಸಂಶೋಧಿಸಲಾದ ಪೊನ್‌ಸ್ಟಿ ವಿಧಾನದ ಮಾಹಿತಿ ನೀಡಿದರು. ಕರ್ನಾಟಕದಲ್ಲಿ ವಕ್ರಪಾದ ಚಿಕಿತ್ಸೆಗೆಂದು ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿಯಲ್ಲಿ ಇಂಥ ಕ್ಲಿನಿಕ್ ಸ್ಥಾಪನೆಯಾಗಿದ್ದು, ಈಗ ಎಂ.ಆರ್.ಮೆಡಿಕಲ್ ಕಾಲೇಜಿನಲ್ಲಿ ಎಂಟನೇ ಕ್ಲಿನಿಕ್ ಆರಂಭಿಸಲಾಗಿದೆ.

 

ಒಂದು ತಿಂಗಳೊಳಗೆ ಮೈಸೂರು, ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ಕ್ಲಿನಿಕ್ ಆರಂಭವಾಗಲಿವೆ ಎಂದು ಕ್ಲಿನಿಕ್‌ನ ರಾಜ್ಯ ಸಂಯೋಜಕ ಗೋಪಿ ಬುಸಾನಾಥಮ್ ಹೇಳಿದರು.ಚ್‌ಕೆಇ ಸಂಸ್ಥೆ ಸದಸ್ಯರಾದ ಡಾ. ಎಸ್.ಆರ್.ಹರವಾಳ, ಎಂ.ಆರ್. ಮೆಡಿಕಲ್ ಕಾಲೇಜಿನ ಡೀನ್ ಡಾ. ಬಿ.ಮಲ್ಲಿಕಾರ್ಜುನ, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ದಿಲೀಪ್ ರಾಂಪುರೆ, ಡಾ. ಎ.ವಿ.ದೇಶಮುಖ ಇತರರು ಇದ್ದರು.

ಪ್ರತಿಕ್ರಿಯಿಸಿ (+)