ಮಾಹಿತಿ ತಂತ್ರಜ್ಞಾನದ ಲಾಭ ಪಡೆಯಿರಿ

7

ಮಾಹಿತಿ ತಂತ್ರಜ್ಞಾನದ ಲಾಭ ಪಡೆಯಿರಿ

Published:
Updated:

ಗುಲ್ಬರ್ಗ: ಮಾಹಿತಿ ತಂತ್ರಜ್ಞಾನ ಬಳಸುವುದರಿಂದ ಹಣ, ಸಮಯ ಉಳಿಸಬಹುದು. ಈ ಹಿನ್ನೆಲೆಯಲ್ಲಿ ಆರಂಭವಾಗಿರುವ ಗುಲ್ಬರ್ಗ ವೆಬ್ ಡಿಸೈನ್ ಹಾಗೂ ನಿಮ್ ಸಾಫ್ಟ್ ಸೊಲ್ಯೂಶನ್ ಕಂಪೆನಿಯ ಲಾಭವನ್ನು ಈ ಭಾಗದ ಜನರು ಪಡೆದುಕೊಳ್ಳಬೇಕು ಎಂದು ಕಾಯಕ ಶಿಕ್ಷಣ ಸಂಸ್ಥೆಯ ಚನ್ನಾರೆಡ್ಡಿ ಪಾಟೀಲ ಕುರಕುಂದಾ ತಿಳಿಸಿದರು.ನಗರದ ಗುಡ್‌ಲಕ್ ಹೋಟೆಲ್‌ನಲ್ಲಿ ಈಚೆಗೆ ಆಯೋಜಿಸಿದ್ದ ಗುಲ್ಬರ್ಗ ವೆಬ್ ಡಿಸೈನ್ ಹಾಗೂ ನಿಮ್ ಸಾಫ್ಟ್ ಸಲೂಶನ್ ಕಂಪೆನಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ವೆಬ್‌ಸೈಟ್ ನೋಂದಣಿ, ವೆಬ್‌ಸೈಟ್ ಹೋಸ್ಟಿಂಗ್, ಶಾಲಾ-ಕಾಲೇಜು ಅಟೋಮೇಷನ್ ಹಾಗೂ ಇನ್ನೂ ಅನೇಕ ರಂಗದಲ್ಲಿ ಇದರ ಉಪಯೋಗವಾಗಲಿದೆ ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ ಕಾರ್ಯಕ್ರಮ ಉದ್ಘಾಟಿಸಿದರು. ಉಮಾಕಾಂತ ನಿಗ್ಗುಡಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಗಂಗಾಧರ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುನೀಲಕುಮಾರ ರಾಠೋಡ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry