ಚಿಂಚೋಳಿ: ಹದಗೆಟ್ಟ ರಸ್ತೆಗಳಿಗೆ ಶುಕ್ರದೆಸೆ

7

ಚಿಂಚೋಳಿ: ಹದಗೆಟ್ಟ ರಸ್ತೆಗಳಿಗೆ ಶುಕ್ರದೆಸೆ

Published:
Updated:

ಚಿಂಚೋಳಿ: ತಾಲ್ಲೂಕಿನಲ್ಲಿ ಹದಗೆಟ್ಟ ರಸ್ತೆಗಳಿಗೆ ಶುಕ್ರದೆಸೆ ಶುರುವಾಗಿದ್ದು, ಅಲ್ಲಲ್ಲಿ ರಸ್ತೆಗಳ ಮರು ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ.ತಾಲ್ಲೂಕಿನ ದಸ್ತಾಪೂರ ಬಳಿಯ ಸೇತುವೆ ಬಳಿ ಕಳೆದ ಸೆಪ್ಟೆಂಬರ್ ಕೊನೆಯಲ್ಲಿ ಶಾಸಕ ಸುನೀಲ ವಲ್ಯ್‌ಪುರ ಚಿಂಚೋಳಿಗೆ ಆಗಮಿಸುತ್ತಿದ್ದಾಗ ರಸ್ತೆಯಲ್ಲಿ ಸಿಕ್ಕುಬಿದ್ದ ಪರಿಣಾಮ ಶಾಸಕರು ದ್ವಿಚಕ್ರ ವಾಹನದ ಮೇಲೆ ಸಂಚರಿಸಲು ಕಾರಣವಾದ ರಸ್ತೆಯನ್ನು ಭಾರಿ ಮಳೆಯಿಂದ ಹಾನಿಯಾದ ಯೋಜನೆ ಅಡಿಯಲ್ಲಿ 0.75 ಕಿ.ಮೀ. ರಸ್ತೆಗೆ ಕಾಯಕಲ್ಪ ನೀಡಲು ರೂ.25 ಲಕ್ಷ ಮಂಜೂರು ಮಾಡಿದ್ದು ಕಾಮಗಾರಿ ಭರದಿಂದ ಸಾಗಿದೆ.ರಸ್ತೆಯ ಡಾಂಬರ್ ಕಿತ್ತುಹೋಗಿ ಹರಕು ಕೌದಿಯಂತೆ ಕಾಣುತ್ತಿದ್ದ ರಸ್ತೆಯನ್ನು ಅಗೆದು ಮುರುಮ್ ಭರ್ತಿ ಮಾಡಿ ರೋಲರ್ ಓಡಿಸಿದ ಗುತ್ತಿಗೆದಾರರು, ಈಗ ಜಲ್ಲಿಕಲ್ಲು ಹಾಸಲು ಮುಂದಾಗಿದ್ದು ಕಲ್ಲು ಒಡೆಯುವ ಕಾರ್ಯದಲ್ಲಿ ಕಾರ್ಮಿಕರು ನಿರತರಾಗಿದ್ದಾರೆ.ಚಿಂಚೋಳಿ ಪಟ್ಟಣದ ಬಳಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಸದರಿ ಯೋಜನೆ ಅಡಿಯಲ್ಲಿ ರಸ್ತೆ ಮರು ನಿರ್ಮಿಸಲಾಗುತ್ತಿದೆ. ಇಲ್ಲಿ ರಸ್ತೆ ಅಗೆದು ಮುರುಮ್ ಭರ್ತಿ ಮಾಡಲಾಗಿದೆ. ಕೋಡ್ಲಿ ಹಾಗೂ ರಟಕಲ್ ಬಳಿಯೂ ಅಲ್ಲಲ್ಲಿ ರಸ್ತೆಯ ಸುಧಾರಣೆ ಸಾಗಿದೆ. ಸುವರ್ಣ ರಸ್ತೆ ಯೋಜನೆ ಅಡಿಯಲ್ಲಿ ಹೂವಿನಭಾವಿಯಿಂದ ಪಸ್ತಪೂರ ವರೆಗಿನ 5.5 ಕೀ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲು 76 ಲಕ್ಷ  ಮಂಜೂರಾಗಿದ್ದು ಕಾಮಗಾರಿ ಡಾಂಬರೀಕರಣಕ್ಕಾಗಿ ಕಾಯುತ್ತಿದೆ. 1.28 ಕೋಟಿ ರೂಪಾಯಿ  ಅಂದಾಜು ವೆಚ್ಚದ ಸಗರ ಬಸಂತಪೂರ ಚಿಮ್ಮನಚೋಡ ರಸ್ತೆಯ ಕಾಮಗಾರಿ ಶುರುವಾಗಿದ್ದು ಒಂದು ಪದರು ಜಲ್ಲಿ ಕಲ್ಲು ಹಾಸಲಾಗಿದೆ. ಜತೆಗೆ ದೇಗಲಮಡಿ ಕ್ರಾಸ್‌ವರೆಗೆ ಸುಮಾರು 2.38 ಕೋಟಿ ವೆಚ್ಚದಲ್ಲಿ ಕೈಗೊಳ್ಳುವ ರಸ್ತೆ ನಿರ್ಮಾಣ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕಾಮಗಾರಿ ಆಮೆ ವೇಗದಲ್ಲಿ ಸಾಗಿದೆ.ಅಂತರರಾಜ್ಯ ರಸ್ತೆ: ಕೇಂದ್ರದ ಭೂಸಾರಿಗೆ ಸಚಿವಾಲಯದ ನೆರವಿನ ಕಳೆದ ಎರಡೂವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 23.78 ಕೋಟಿ ರೂಪಾಯಿ ವೆಚ್ಚದ ಆಂಧ್ರದ ಗಡಿಯಿಂದ ಚಿಂಚೋಳಿಯ ಷುಗರ್ ಮಿಲ್ ವರೆಗಿನ ರಸ್ತೆಯ ಮರುನಿರ್ಮಾಣ ಕಾಮಗಾರಿಗೂ ಚಾಲನೆ ಸಿಕ್ಕಿದೆ. ಕಾಮಗಾರಿ ಅಧಿಕೃತವಾಗಿ ಶುರುವಾಗಲು ಅಡಿಗಲ್ಲು ಸಮಾರಂಕ್ಕಾಗಿ ಕಾಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry