ಬುಧವಾರ, ಜೂನ್ 23, 2021
30 °C

ಅಭಿವೃದ್ಧಿಗೆ ಶ್ರಮಿಸಿದ ವೀರೇಂದ್ರ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಅಭಿವೃದ್ಧಿ ಕೆಲಸಗಳಿಂದ ಗುರುತಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲರು ರಾಜ್ಯದ ಜನಮಾನಸದಲ್ಲಿ ಸದಾ ಉಳಿದುಕೊಂಡಿದ್ದಾರೆ ಎಂದು ಅವರ ಪುತ್ರ ಕೈಲಾಸನಾಥ ಪಾಟೀಲ ಬುಧವಾರ ಇಲ್ಲಿ ಸ್ಮರಿಸಿದರು.ವೀರೇಂದ್ರ ಪಾಟೀಲ ನಗರದ ಶಿವಮಂದಿರದಲ್ಲಿ `ಶ್ರೀ ವೀರೇಂದ್ರ ಪಾಟೀಲ ಕ್ಷೇಮಾಭಿವೃದ್ಧಿ ಸಮಿತಿ~ಯು ಆಯೋಜಿಸಿದ್ದ ಪುಣ್ಯತಿಥಿ  ಸಮಾರಂಭದಲ್ಲಿ ಮಾತನಾಡಿದರು.`ಮಗನಾಗಿ ಹೇಳಿಕೊಂಡರೆ ಅತಿಶಯೋಕ್ತಿಯಾಗುತ್ತದೆ. ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರ ಬಗ್ಗೆ ಸ್ವತಃ ಜನರು ಸ್ಮರಿಸಿಕೊಳ್ಳುವುದನ್ನು ನಾನು ಕಂಡಿದ್ದೇನೆ~ ಎಂದರು. ಬಹುಶೆಟ್ಟಿ ನಿರೂಪಿಸಿದರು. ಪಿ.ಜಿ. ಕಾಳೆ ವಂದಿಸಿದರು. ಸಮಿತಿಯ ಪದಾಧಿಕಾರಿಗಳು ಸಮಾರಂಭದಲ್ಲಿ ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.