ಶುಕ್ರವಾರ, ಜೂನ್ 18, 2021
20 °C

ಸಾಹಿತಿ, ಕಲಾವಿದರ ಮಾಹಿತಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ನಗರದ ಜ್ಞಾನಾಮೃತ ಪ್ರಕಾಶನ ಸಂಸ್ಥೆ ವತಿಯಿಂದ ಗುಲ್ಬರ್ಗ ವಿಭಾಗ ವ್ಯಾಪ್ತಿಯ ಸಾಹಿತಿ, ಕಲಾವಿದರ ಮಾಹಿತಿಯನ್ನೊಳಗೊಂಡ ಎರಡು ಕೃತಿಗಳನ್ನು ಹೊರತರಲಾಗುತ್ತಿದ್ದು ಆಸಕ್ತ ಕಲಾವಿದ ಮತ್ತು ಸಾಹಿತಿಗಳು, ಬರಹಗಾರರು ತಮ್ಮ ವಯಕ್ತಿಕ ವಿವರವನ್ನು ಏಪ್ರಿಲ್ 15ರೊಳಗೆ ಕಳುಹಿಸಿಕೊಡಬಹುದಾಗಿದೆ.ಜ್ಞಾನಾಮೃತ ಪ್ರಕಾಶನ ಸಂಸ್ಥೆಯಿಂದ ಈಗಾಗಲೇ ಕೆಲ ಕೃತಿಗಳು ಬಿಡುಗಡೆಗೆ ಸಿದ್ಧವಾಗಿದ್ದು ಇವುಗಳ ಜತೆಗೆ ಈ ಭಾಗದ ಸಾಹಿತಿ ಹಾಗೂ ಬರಹಗಾರರ ಪರಿಚಯದ ಇನ್ನೆರಡು ಕೃತಿಗಳನ್ನು ಶೀಘ್ರ ಹೊರತರಲಾಗುತ್ತಿದೆ.

ಸಾಹಿತ್ಯ ಹಾಗೂ ಕಲೆಗಳಲ್ಲಿ ಎರಡೂ ವಿಭಾಗದಲ್ಲಿ ಗುರುತಿಸಿಕೊಂಡವರು ಪ್ರತ್ಯೇಕವಾಗಿ ಕೆಳಗಿನ ವಿಳಾಸಕ್ಕೆ ಮಾಹಿತಿ ಕಳುಹಿಸಿಕೊಡಬಹುದು.ಈ ಸಂಬಂಧ ಹೆಚ್ಚಿನ ಮಾಹಿತಿಗೆ ನರಸಿಂಗರಾವ ಕುಲಕರ್ಣಿ, ಜ್ಞಾನಾಮೃತ ಪ್ರಕಾಶನ, 3-326, ಚಕ್ರಕಟ್ಟಾ         ಹನುಮಾನ ಮಂದಿರ ಬಳಿ, ಗಾಜಿಪುರ, ಗುಲ್ಬರ್ಗ (ಮೊಬೈಲ್ 97310       43253, 77955 06923)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.