ಎರಡನೇ ಹಂತದ ಸಹಿ ಅಭಿಯಾನಕ್ಕೆ ಚಾಲನೆ

7

ಎರಡನೇ ಹಂತದ ಸಹಿ ಅಭಿಯಾನಕ್ಕೆ ಚಾಲನೆ

Published:
Updated:

ಗುಲ್ಬರ್ಗ: ಬಾಬಾ ರಾಮದೇವ್ ಅವರ ‘ಸಾಲ ಮುಕ್ತ ಭಾರತ’ದ ಸಂಕಲ್ಪದಂತೆ ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರಲು ಆಗ್ರಹಿಸಿ ಹಮ್ಮಿಕೊಂಡ ಎರಡನೇ ಹಂತದ ಸಹಿ ಸಂಗ್ರಹ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು. 5500 ತಾಲ್ಲೂಕುಗಳಲ್ಲಿ ಈಗ ಸಹಿಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಹತ್ತ ಲಕ್ಷ ಸಹಿಸಂಗ್ರಹದ ಗುರಿ ಇದೆ. ಭಾನುವಾರ ಸಂಗ್ರಹಿಸಿದ ಸಹಿಗಳೊಂದಿಗೆ ಮನವಿ ಪತ್ರವನ್ನು ತಹಸೀಲ್ದಾರ್ ಕಚೇರಿ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನಿಯವರಿಗೆ ಕಳುಹಿಸಲಾಯಿತು.ಭಾನುವಾರ ಯೋಗಸಾಧಕರು, ಸಮಿತಿಯ ಸರ್ವಸದಸ್ಯರು ಹಾಗೂ ವಿದ್ಯಾರ್ಥಿಗಳು ಶಾಂತಿಯುತ ಪಾದಯಾತ್ರೆಯ ಮೂಲಕ ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಯಿತು. ಸುಮಂಗಲಾ ಚಕ್ರವರ್ತಿ, ಇಂದಿರಾ ರಾಠೋಡ, ಜಿ.ಚಂದ್ರಶೇಖರ, ಶರಣು ಹೀರಾ, ನಾಗಲಿಂಗಯ್ಯ ಹಿರೇಮಠ, ರಾಜಶ್ರೀ ದೇಶಮುಖ, ಶಿವಾನಂದ ಹಿರೇಮಠ, ನಾಗೇಂದ್ರಪ್ಪ ದಂಡೋತಿಕರ್, ಜಯಪ್ಪ ಬಡಿಗೇರ ಶಿವಾನಂದ ಸಾಲಿಮಠ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry