ಗುರುವಾರ , ಮೇ 13, 2021
16 °C

ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹಿಂದುಳಿದ ವರ್ಗದ ಶೇ. 27ರ ಮೀಸಲಾತಿಯಲ್ಲೆ ಶೇ. 4.5ರಷ್ಟು ಮುಸ್ಲಿಮ್‌ರಿಗೆ ಮೀಸಲಾತಿ ಕಲ್ಪಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಅಲ್ಪಸಂಖ್ಯಾತರ ಮತ ಓಲೈಕೆ ಮಾಡುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಸೋಮವಾರ ಇಲ್ಲಿನ ಮಿನಿ ವಿಧಾನಸೌಧದ ಎದುರು ಧರಣಿ ನಡೆಸಿದರು.ಈಗಾಗಲೇ ಮುಸ್ಲಿಮರು ಹಿಂದುಳಿದ ವರ್ಗದ ಮೀಸಲಾತಿಯಲ್ಲಿ ಸೌಲಭ್ಯ ಪಡೆಯುತ್ತಿದ್ದಾರೆ. ಪ್ರತ್ಯೇಕ ಮೀಸಲಾತಿ ಕಲ್ಪಿಸುವ ಅಗತ್ಯ ಇರುವುದಿಲ್ಲ. ಒಂದು ವೇಳೆ ಹಿಂದುಳಿದ ವರ್ಗದ ಮೀಸಲಾತಿ ಕಡಿಮೆಗೊಳಿಸಿದರೆ, ಹಿಂದುಳಿದ ವರ್ಗಕ್ಕೆ ದೊಡ್ಡ ಮೋಸ ಮಾಡಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.ಮುಸ್ಲಿಂ ಮೀಸಲಾತಿ ಮಸೂದೆಯು ಸಂಪೂರ್ಣ ಕರಾಳವಾಗಿದ್ದು, ತಕ್ಷಣ ರದ್ದುಗೊಳಿಸಬೇಕು. ಪ್ರತ್ಯೇಕ ಮೀಸಲಾತಿ ನೀಡುವುದರಿಂದ ದೇಶದಲ್ಲಿ ಅಶಾಂತಿ ತಲೆದೋರುವ ಸಾಧ್ಯತೆ ಇದೆ ಎಂದು ವಿವರಿಸಲಾಗಿದೆ.ದೇಶದಲ್ಲಿನ ಗೋವಂಶ ಸಂರಕ್ಷಣೆಗೆ ಕೇಂದ್ರ ಸರ್ಕಾರ ವಿಶೇಷ ಮುತೂವರ್ಜಿ ವಹಿಸಬೇಕು ಎಂದು ಈ ಮೂಲಕ ಕೇಳಿಕೊಳ್ಳಲಾಗಿದೆ. ಮದುಕರ್ ನಾಯಕ, ಚಂದ್ರಕಾಂತ ಕಾಳಗಿ, ಮಲ್ಲಿಕಾರ್ಜುನ ಆಡ್ವಾಣಿ, ಶಶಿಕಾಂತ ದಿಕ್ಷಿತ, ಕೆ.ಪಿ. ಪಂಡಿತಜೀ ಡಿ.ಡಿ. ದೇಸಾಯಿ, ರಾಮು ಕುಸಾಳೆ, ಮಹೇಶ ಪಾಟೀಲ, ಶಿವಕುಮಾರ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.